For proper results, open this webpage in Internet Explorer

Saturday, April 5, 2008

ಎಲ್ಲಿ ಜಾರಿತೋ

ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ


ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ || ಎಲ್ಲಿ ||ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ

ದಾಟಿ ಬಂತು ಬೇಲಿಸಾಲ ಮೀಟಿ ಹಳೆಯ ಮಧುರ ನೋವ || ಎಲ್ಲಿ ||ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೋರೆ

ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ || ಎಲ್ಲಿ ||ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪೋ

ಬಂದು ಚೀರುವೆದೆಯ ಭಾವ ಹೇಳಲಾರೆ ತಾಳಲಾರೆ || ಎಲ್ಲಿ ||

2 comments:

anuradha said...

ನಿಮ್ಮ ಪ್ರಯತ್ನ ಮೆಚ್ಚುವಂತಹುದು. ಹಿಂದೆ ದೂರದರ್ಶನದಲ್ಲಿ ಬಂದಿದ್ದ " ಹೂವು ಅರಳುವವು ಸೂರ್ಯನ ಕಡೆಗೆ ನಮ್ಮ ದಾರಿ ಬಾರಿ ಚಂದ್ರನ ವರೆಗೆ" ಗೀತೆ ಇದ್ದಾರೆ ದಯವಿಟ್ಟು ಇದರಲ್ಲಿ ಹಾಕಿ

Sathyanarayana.R.G said...

ನಮಸ್ಕಾರ ಅನುರಾಧರವರೇ

ನಾನು ಈ ಗೀತೆಯನ್ನು ಇನ್ನು ಒಂದು ವಾರದಲ್ಲಿ ಹಾಕುತ್ತೇನೆ. ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ತಿಳಿಸುತ್ತಿರಿ. ನನ್ನ ಪ್ರಯತ್ನವನ್ನಿ ನಾನು ಮಾಡುತ್ತೇನೆ.

ಸತ್ಯನಾರಾಯಣ

COMMENTS