For proper results, open this webpage in Internet Explorer

Monday, March 31, 2008

ದೀಪವು ನಿನ್ನದೆ

ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ




ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು

ಕಡಲು ನಿನ್ನದೆ ಹಡಗು ನಿನ್ನದೆ ಮುಳುಗದಿರಲಿ ಬದುಕು || ದೀ ||



ಬೆಟ್ಟವು ನಿನ್ನದೆ ಬಯಲು ನಿನ್ನದೆ ಹಬ್ಬಿನದಲಿ ಪ್ರೀತಿ

ನೆಳಲೊ ಬಿಸಿಲೊ ಎಲ್ಲವು ನಿನ್ನದೆ ಇರಲಿ ಏಕ ರೀತಿ || ದೀ ||



ಆಗೊಂದು ಸಿಡಿಲು ಈಗೊಂದು ಮುಗಿಲು ನಿನಗೆ ಅಲಂಕಾರ

ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು ನಿನಗೆ ನಮಸ್ಕಾರ || ದೀ ||



ಅಲ್ಲಿ ರಣದುಂದುಭಿ ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ

ಆ ಮಹಾಕಾವ್ಯ ಈ ಭಾವಗೀತೆ ನಿನ್ನ ಪದ ಧ್ವನಿಯೆ || ದೀ ||

ಲೋಕದ ಕಣ್ಣಿಗೆ

ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ



ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು

ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು



ತಿಂಗಳ ರಾತ್ರಿ ತೊರೆಯ ಸಮೀಪ

ಉರಿದರೆ ಯಾವುದೋ ದೀಪ

ಯಾರೋ ಮೋಹನ ಯಾವ ರಾಧೆಗೋ

ಪಡುತಿರುವನು ಪರಿತಾಪ || ಲೋ ||


ನಾನು ನನ್ನದು ನನ್ನವರೆನ್ನುವ

ಹಲವು ತೊಡಕುಗಳ ಮೀರಿ

ಧಾವಿಸಿ ಸೇರಲು ಬೃಂದಾವನವ

ರಾಧೆ ತೋರುವಳು ದಾರಿ || ಲೋ ||


ಮಹಾಪ್ರವಾಹ ಮಹಾಪ್ರವಾಹ ಮಹಾಪ್ರವಾಹ ಮಹಾಪ್ರವಾಹ

ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ

ತೊರೆದರೂ ತನ್ನ ತೊರೆಯನು ಪ್ರಿಯನ

ರಾಧೆಯ ಪ್ರೀತಿಯ ರೀತಿ ಇದು || ೨|| || ಲೋ ||

COMMENTS