For proper results, open this webpage in Internet Explorer

Monday, April 7, 2008

ಓ ನನ್ನ ಚೇತನ


ಓ ನನ್ನ ಚೇತನ ಆಗು ನೀ ಅನಿಕೇತನರೂಪರೂಪಗಳನು ದಾಟಿ

ನಾಮ ಕೋಟಿಗಳನು ಮೀಟಿ

ಎದೆಯ ಬಿರಿಯೆ ಭಾವ ದೀಟಿ || ಓ ನನ್ನ ||ನೂರು ಮತದ ಹೊಟ್ಟತೂರಿ

ಎಲ್ಲ ತತ್ವದೆಲ್ಲೆ ಮೀರಿ

ನಿರ್ದಿಗಂತವಾಗಿ ಏರಿ || ಓ ನನ್ನ ||ಎಲ್ಲಿಯೂ ನಿಲ್ಲದಿರು

ಮನೆಯನೆಂದು ಕಟ್ಟದಿರು

ಕೊನೆಯನೆಂದು ಮುಟ್ಟದಿರು || ಓ ನನ್ನ ||ಅನಂತ ತಾನನಂತವಾಗಿ

ಆಗುತಿಹನೆ ನಿತ್ಯಯೋಗಿ

ಅನಂತ ನೀ ಅನಂತವಾಗು

ಆಗು ಆಗು ಆಗು ಆಗು || ಓ ನನ್ನ ||


No comments:

COMMENTS