For proper results, open this webpage in Internet Explorer

Saturday, October 25, 2008

ಶ್ಯಾನುಬೋಗರ ಮಗಳು

ಶ್ಯಾನುಬೋಗರ ಮಗಳು ತಾಯಿ ಇಲ್ಲದ ಹುಡುಗಿ

ರತ್ನದಂತಹದ ಹುಡುಗಿ ಊರಿಗೆಲ್ಲ

ಬಲು ಜಾಣೆ ಗಂಬಿರೇ ಹೆಸರು ಸೀತಾದೇವಿ

ಹನ್ನೆರಡು ತುಂಬಿಹುದು ಮದುವೆಇಲ್ಲತಾಯಿಇಲ್ಲಾದ ಹೆಣ್ಣು ಮಿಂಚ ಬೀರುವ ಕಣ್ಣು

ಒಮ್ಮೊಂಮ್ಮೆ ಕಣ್ಣೀರು ಸುರಿಸೀಹಿಹುದು

ತಾಯಿ ಎಂದುದುಬಂಧು ತಂಪಾ ನೆರೆಹುವದೆಂದು

ಇಂಥ ಬಾಳಿಗೆ ಹೊಳವೆನಿನ್ನ ಕನಸು ॥ಶ್ಯಾನುಬೋಗರ ಮಗಳು॥ಅತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ

ನೀರು ತರುವಾಗ ಅವಳ ನೋಡಬೇಕು

ಕರುವಣಡಿಸುವಾಗ ಮಲ್ಲಿಗೆಯ ಬನಧೊಲಗೆ

ಅವಳ ಗಂಡನ ಹೆಸರ ಕೇಳಬೇಕು ॥ಶ್ಯಾನುಬೋಗರ ಮಗಳು॥ಮೊನ್ನ್ನೆ ತಾವಗೆರೆಯ ಜೋಯಿಸರ ಮೊಮ್ಮಗನು

ಹೆಣ್ಣ ನೋಡಲು ಬಂದ ಅವರ ಮನೆಗೆ

ವ್ಹಿಧಿಕರ ಮನೆಗಳಲ್ಲಿ ಊಟ ಹೊತ್ತಾಗುವದು

ಒಲ್ಲೆ ನೆಂದಳೂ ಸೀತೆ ಕೋಣೆಯೊಳಗ

ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ

ಒಳಗೆ ನಾಂಧಾ ದೀಪಾ ನಂಧಿ ಹೋಗಿ

ಹಲವ ನುಡಿಧುದೂ ಹಲ್ಲಿ ಏಳಳೆನಿದೆ ಮುಂದೆ

ತೆರಳಿದನು ಜಾಯಿಸನು ತಣ್ಣಗಾಗಿ ॥ಶ್ಯಾನುಬೋಗರ ಮಗಳು॥ಬೆಳಗದ ಕೆರೆಯಾಬಲಿ ನನ್ನ ತಂಗಿಯ ಕಂಡು

ಕನ್ನೆ ತೋರಿದಲಾಂತೆ ಕಾರಣವನು

ಹೊನ್ನೂರ ಕೆರಿಯಿಂದ ಬನ್ದಿದ್ದ ಹೊಸ ಗಂಡು

ತನ್ನ್ನ ಕುದಲಿಗಿನ್ಥ್ತ ಕಪ್ಪು ಎನ್ಧು

ನಮ್ಮೂರಿನ ಅಕ್ಕರೆಯ ಸಕ್ಕರೆಯ ಗೊಂಬೆಯನು

ನೋಡಬೇಕು ಅಂತ ಕಪ್ಪು ಗಂಡು

ಶ್ಯಾನುಬೋಗರ ಮನೆಯ ತೋರಣವೇ ಏಳುವದು

ಬಂದ ದಾರಿಗೆ ಸುಂಕಾ ಇಲ್ಲಯೆನ್ದು ॥ಶ್ಯಾನುಬೋಗರ ಮಗಳು॥ಶ್ಯಾನುಬೋಗರ ಮಗಳು ತಾಯಿ ಇಲ್ಲದ ಹುಡಿಗಿ

ರತ್ನದನಥಹದ ಹುಡುಗಿ ಊರಿಗೆಲ್ಲ

ಗಂಡು ಸಿಕ್ಕುವದೋಂದು ಕಸ್ಟವಲ್ಲ

ಸರಿಯಾದ ಗನ್ದನೊನ್ದಿಗೆ ಹೆಣ್ಣು ಸುಕವಾಗಿರಲು

ತಡವಾದರೇನಂತೆ ನಸ್ಟಯಿಲ್ಲ

ತಡವಾದರೇನಂತೆ ನಸ್ಟಯಿಲ್ಲ

ತಡವಾದರೇನಂತೆ ನಷ್ಟಯಿಲ್ಲ.

ಆಕಾಶದ ನೀಲಿಯಲ್ಲಿ

ಆಕಾಶದ ನೀಲಿಯಲ್ಲಿ ಚಂದ್ರ ತರೆ ತೊಟ್ಟಿಲಲ್ಲಿ

ಬೆಳಕನಿಟ್ಟು ತೂಗೀದಕೆ

ನಿನಗೆ ಬೇರೆ ಹೆಸರು ಬೇಕೇ

ಸ್ತ್ರೀ.......

ಸ್ತ್ರೀ ಎಂದರೆ ಅಷ್ಟೇ ಸಾಕೆ
ಹಸಿರನುಟ್ಟ ಬೆಟ್ಟ ಗಳಲ್ಲಿ

ಮೋಲ್ ಹಾಲಿನಾ ಹೊಳೆಯನ್ ಈಳಿಸಿ

ಬಯಲ ಹಸಿರ ನಗಿಸಿದಕೆ

ನಿನಗೆ ಬೇರೆ ಹೆಸರು ಬೇಕೇ

ಸ್ತ್ರೀ ಎಂದರೆ ಅಷ್ಟೇ ಸಾಕೆ
ಮರಗಿಡವು ಮೂಂಗೂರುಳನೂ

ತಂಗಳಿಯಾ ಬೆರಾಳ ಸವರಿ

ಹತ್ತಿ ಈಲಾಕಿ ಇಳಿಸಿದಕೆ

ನಿನಗೆ ಬೇರೆ ಹೆಸರು ಬೇಕೇ

ಸ್ತ್ರೀ ಎಂದರೆ ಅಷ್ಟೇ ಸಾಕೆ
ಮನೆ ಮನೆಯಲಿ ದೀಪ ಮೂಡಿಸಿ

ಒತ್ತು ಒತ್ತಿ ಗೆ ಅನ್ನ ಉಣಿಸಿ

ತಂದೆ ಮಗುವ ತಬ್ಬಿದಕೆ

ನಿನಗೆ ಬೇರೆ ಹೆಸರು ಬೇಕೇ

ಸ್ತ್ರೀ ಎಂದರೆ ಅಷ್ಟೇ ಸಾಕೆ

ಎಲ್ಲೋ ಹುಡುಕಿದೆ ಇಲ್ಲದ ದೇವರ

ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ ಸ್ನೇಹಗಳ

ಗುರುತಿಸದಾದೆವು ನಮ್ಮೊಳಗೆ || ಎಲ್ಲೋ ||ಎಲ್ಲಿದೆ ನಂದನ ಎಲ್ಲಿದೆ ಬಂಧನ

ಎಲ್ಲಾ ಇವೆ ಈ ನಮ್ಮೊಳಗೆ

ಒಳಗಿನ ತಿಳಿಯನು ಕಲಕದೆ ಇದ್ದರೆ

ಅಮೃತದ ಸವಿಯಿದೆ ನಾಲಗೆಗೆ || ಎಲ್ಲೋ ||ಹತ್ತಿರವಿದ್ದೂ ದೂರ ನಿಲ್ಲುವೆವು

ನಮ್ಮ ಅಹಂಮಿನ ಕೋಟೆಯಲಿ

ಎಷ್ಟು ಕಷ್ಟವೋ ಹೊಂದಿಕೆಯೆಂಬುದು

ನಾಲ್ಕು ದಿನದ ಈ ಬದುಕಿನಲ್ಲಿ || ಎಲ್ಲೋ ||

ಬಂದರೂ ಬಾರದ ಹಾಗೇ

ಬಂದರೂ ಬಾರದ ಹಾಗೇ ಯಾಕೆ ಸುಮ್ಮನೆ ನಾವು

ಹಾದಿ ಕಾಯುತ್ತೇವೋ

ಬಂದರು ಬಾರದ ಹಾಗೇ ಇರುವಂಥವರ!ಒಳಗಿನ ಬೆಂಕಿ ನಾಲಿಗೆಯ ಮೇಲಾಡಿ

ಕಣ್ಣ ಕೊನೆಯಿಂದ ಕಿಡಿಕಾರಿ

ಚಟಪಟ ಸಿಡಿದುಹೊರಟು ಹೋದವರ

ಕಾಯುತ್ತೇವೆ ಯಾಕೆ?

ಹೊಡೆದುಕೊಳ್ಳುವ ಹೃದಯವ ಅಂಗೈಲಿಟ್ಟುಕೊಂಡು
ಇಲ್ಲವೇ ನಿಮ್ಮಲ್ಲಿ? ಇರಲಿ ಬಿಡಿ

ಬಂದಾರು; ಸರಿ. ಬಂದರೆ ತಿಳಿಸುವೆ,

ಬಂದರೆಂದು.

(ಆಚೆ ದನಿಗೇನು ಗೊತ್ತು ಬಾರದೆಯು ಇರಬಹುದೆಂದು)ಇನ್ನೇನು ಮುಗಿಯುತ್ತದೆ ಕಾದು ಕೂರವ ಹೊತ್ತು,

ಯಾರಾದರು ಬಂದು ಹೃದಯದ ಬಾಗಿಲ ಬಡಿದು

ತಿಳಿಸಿಬಿಡಲಿ.ಏನ ಕಾಯುತ್ತೇವೆ? ಯಾಕೆ ಕಾಯುತ್ತೇವೆ?

ಬರುವುದನ್ನೋ? ಬಾರದಿರುವುದನ್ನೋ?ತೆರೆದ ಬಾಗಿಲಿನಿಂದ ಕತ್ತಲು ನುಗ್ಗಿದ ಹಾಗೆ

ಕಡೆಗೂ ಬಂದರೂ ಬಾರದ ಹಾಗೇ!!!!!!

Thursday, October 23, 2008

ಯಾರು ಜೀವವೆ ಯಾರು ಬಂದವರೊ

ಯಾರು ಜೀವವೆ ಯಾರು ಬಂದವರೊ

ಭಾವನೆಗಳನೇರಿ

ಒಣಗಿದೆನ್ನೆದೆಗೆ ಮಳೆಯ ತಂದವರೊ

ಬಿಸಿಲ ತೆರೆಯ ಸೀಳಿ || ಯಾರು ||ಬಾನ ನೀಲಿಯಲಿ ಕರಿಬಿಳಿ ಬಣ್ಣದ

ಗಾನ ಚಿಮ್ಮಿದವರೊ

ಕಾನು ಮಲೆಗಳಲಿ ಚಿಗುರು ಹೂವುಗಳ

ಚಪ್ಪರ ಬೆಳೆದವರೊ || ಯಾರು ||ನಸುಕಿನ ಬೆಳಕನು ಮಂಜಿನ ತೆರೆಯಲಿ

ಜಾಲಿಸಿ ಬಿಡುವವರೊ

ಮಣ್ಣಿನ ಮುಖದಲಿ ಹಸುರಿನ ಸುಂದರ

ಕಣ್ಣ ಬಿಡಿಸಿದವರೊ || ಯಾರು ||ಯಾರು ಜೀವವೆ ಘಳಿಗೆ ಹಿಂದೆ ಈ

ಮನದಲಿ ಮೂಡಿದರೊ

ಯಾರು ಎಂದು ನಾ ತಿಳಿಯುವ ಮೊದಲೆ

ಕಾಣದೆ ಸರಿದವರೊ || ಯಾರು ||

ಮುಚ್ಚು ಮರೆಯಿಲ್ಲದೆಯೆಮುಚ್ಚು ಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು

ಬಿಚ್ಚಿಡುವೆ ಓ ಗುರುವೇ ಅಂತರಾತ್ಮ

ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ

ಸ್ವೀಕರಿಸು ಓ ಗುರುವೇ ಅಂತರಾತ್ಮ || ಮುಚ್ಚು ||ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು

ಪಾಪ ತಾನುಳಿಯುವುದೆ ಪಾಪವಾಗಿ

ಗಂಗೆ ತಾನೋದ್ಭವಿಪ ನಿನ್ನಡಿಯ ಸೋಕಿಂಗೆ

ನರಕ ತಾನುಳಿಯುವುದೆ ನರಕವಾಗಿ || ಮುಚ್ಚು ||ಶಾಂತ ರೀತಿಯೊಳಿಮ್ಮಿ ಕದಡಿರುವುದೆನ್ನಾತ್ಮ

ನಾಂತ ರೀತಿಯು ಅದೆಂತೊ ಓ ಅನಂತ

ನನ್ನ ನೀತಿಯ ಪುರುಡಿನಿಂದೆನ್ನ ರಕ್ಷಿಸೆ

ನಿನ್ನ ನೀತಿಯ ಬೆಳಕಿನ ಆನಂದಕ್ಕೆ || ಮುಚ್ಚು ||

Friday, July 11, 2008

ಅಮ್ಮ ನಿನ್ನ ಎದೆಯಾಳದಲ್ಲಿ

ಕವಿ: ಬಿ ಆರ್ ಲಕ್ಷ್ಮಣ್ ರಾವ್

ನೀವು ಹಾಡನ್ನು ಈಗ ಕೇಳಲು ಇಲ್ಲಿ ಕ್ಲಿಕ್ ಮಾಡಿ - "ಹೊಸ ಅಂಶ"

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು

ಕಡಿಯಾಲೊಲ್ಲೇ ಕರುಳ ಬಳ್ಳಿ

ಒಲವೂಡುತಿರುವ ತಾಯೆ ಬಿಡದ ಭುವಿಯ ಮಾಯೆ.
ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ ದೂಡು ಹೊರಗೆ ನನ್ನ

ಓಟ ಕಲಿವೆ ಒಳನಾಟ ಕಲಿವೆ

ನಾ ಕಲಿವೆ ಊರ್ಧ್ವಗಮನ

ಅಗಾಧ ಗಗನ || ಅಮ್ಮ ನಿನ್ನ ||
ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭರ ಸ್ಥಿತಿಗೆ ತಲುಪಿ ಬ್ರಹ್ಮಾಂಡವನ್ನೇ ಬೆದಕಿ

ಇಂಧನ ತೀದಲು ಬಂದೆ ಬರುವೆನು

ಮತ್ತೆ ನಿನ್ನ ತೊಡೆಗೆ

ಮೂರ್ತ ಪ್ರೇಮದೆಡೆಗೆ || ಅಮ್ಮ ನಿನ್ನ ||

ಆನಂದಮಯ ಈ ಜಗ ಹೃದಯ

ಕವಿ: ರಾಷ್ಟ್ರಕವಿ ಕುವೆಂಪು

ಕವಿಯ ಬಗ್ಗೆ:
ಪೂರ್ತಿ ಹೆಸರು: ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕಾಲ: ಡಿಸೆಂಬರ್ ೨೯, ೧೯೦೪ - ನವೆಂಬರ್ ೧೦, ೧೯೯೪
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀವು ಹಾಡನ್ನು ಈಗ ಕೇಳಲು ಇಲ್ಲಿ ಕ್ಲಿಕ್ ಮಾಡಿ - "ಹೊಸ ಅಂಶ"


ಆನಂದಮಯ ಜಗಹೃದಯ ಏತಕೆ ಭಯ ಮಾಣೋ

ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ

ಆನಂದಮಯ ಜಗಹೃದಯಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ

ಸೂರ್ಯನು ಬರಿ ರವಿಯಲ್ಲವೋ ಭ್ರಾಂತಿಯ ಮಾಣೋ

ಆನಂದಮಯ ಜಗಹೃದಯ.ರವಿವದನವೇ ಶಿವಸದನವೊ ಬರಿ ಕಣ್ಣದು ಮಣ್ಣೋ

ಶಿವನಿಲ್ಲದೆ ಸೌಂದರ್ಯವೇ ಶವ ಮುಖದ ಕಣ್ಣೋ

ಆನಂದಮಯ ಜಗಹೃದಯ.ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ

ಶಿವಕಾಣದೆ ಕವಿ ಕುರುಡನೋ ಶಿವ ಕಾವ್ಯದ ಕಣ್ಣೋ

ಆನಂದಮಯ ಜಗಹೃದಯ.

Sunday, June 29, 2008

ಘಮ ಘಮ ಘಮಾಡಿಸ್ತಾವ ಮಲ್ಲಿಗೆ

ಕವಿ: ರಾ ಬೇಂದ್ರೆ

ಕವಿಯ ಬಗ್ಗೆ:
ಪೂರ್ತಿ ಹೆಸರು: ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಕಾಲ: ಜನವರಿ ೩೧ ೧೮೯೬ - ೨೧ ಅಕ್ಟೋಬರ್ ೧೯೮೧
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀವು ಹಾಡನ್ನು ಈಗ ಕೇಳಲು ಇಲ್ಲಿ ಕ್ಲಿಕ್ ಮಾಡಿ - "ಹೊಸ ಅಂಶ"

ಘಮ ಘಮ ಘಮಾಡಿಸ್ತಾವ ಮಲ್ಲಿಗೆ

ನೀ ಹೊರಟಿದ್ದೀಗ ಎಲ್ಲಿಗೆ


ತುಳುಕ್ಯಾಡುತ್ತಾವ ತೂಕಡಿಕಿ ಎವಿ ಅಪ್ಪುತ್ತಾವ ಕಣ್ ದುಡುಕಿ

ಕನಸು ತೇಲಿ ಬರುತ್ತಾವ ಹುಡುಕಿ

ನೀ ಹೊರಟಿದ್ದೀಗ ಎಲ್ಲಿಗೆ || ಘಮ ||ಚಿಕ್ಕಿ ತೋರಿಸ್ತಾವ ಚಾಚಿ ಬೆರಳ ಚಂದ್ರಮ ಕನ್ನಡಿ ಹರಳ

ಮನ ಸೋತು ಆಯಿತು ಮರುಳ

ನೀ ಹೊರಟಿದ್ದೀಗ ಎಲ್ಲಿಗೆ || ಘಮ ||ನೆರಳಲ್ಲಾಡುತ್ತಾವ ಮರದ ಬುಡಕ್ಕ ಕೆರಿ ತೇರಿ ನೂಗುತ್ತಾವ ದಡಕ್ಕ

ಹಿಂಗ ಬಿಟ್ಟು ಇಲ್ಲಿ ನನ್ನ ನಡಕ

ನೀ ಹೊರಟಿದ್ದೀಗ ಎಲ್ಲಿಗೆ || ಘಮ ||ನನ್ನ ನಿನ್ನ ಒಂದತನದಾಗ ಹಾಡು ಹುಟ್ಟಿ ಒಂದು ಮನದಾಗ

ಬೆಳದಿಂಗಳಾತು ಬನದಾಗ

ನೀ ಹೊರಟಿದ್ದೀಗ ಎಲ್ಲಿಗೆ || ಘಮ ||ಬಂತ್ಯಾಕ ನಿನಗ ಇಂದ ಮುನಿಸು ಬೀಳಲಿಲ್ಲ ನಂಗ ಇದರ ಕನಸು

ಪ್ರಾಯ ತಿಳಿಯಲಿಲ್ಲ ನಿನ್ನ ಮನಸು

ನೀ ಹೊರಟಿದ್ದೀಗ ಎಲ್ಲಿಗೆ || ಘಮ ||
Thursday, May 15, 2008

ಈ ಬಾನು ಈ ಚುಕ್ಕಿಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ

ತೇಲಿ ಸಾಗುವ ಮುಗಿಲು ಹರುಷ ಉಕ್ಕಿ

ಯಾರು ಇಟ್ಟರು ಇವನು ಹೀಗೆ ಇಲ್ಲಿ

ತುದಿಮೊದಲು ತಿಳಿಯದೀ ನೀಲಿಯಲಿ || ಈ ಬಾನು ||ಒಂದೊಂದು ಹೂವಿಗೂ ಒಂದೊಂದು ಬಣ್ಣ

ಒಂದೊಂದು ಜೀವಕೂ ಒಂದೊಂದು ಕಣ್ಣ

ಯಾವುದೋ ಬಗೆಯಲ್ಲಿ ಎಲ್ಲರಿಗೂ ಅನ್ನ

ಕೊಟ್ಟ ಕರುಣೆಯ ಮೂಲ ಮರೆಸಿಹುದು ತನ್ನ || ಈ ಬಾನು ||ನೂರಾರು ನದಿ ಕುಡಿದು ಮೀರದ ಕಡಲು

ಬೋರೆಂದು ಸುರಿ ಸುರಿದು ಆರದ ಮುಗಿಲು

ಸೇರಿಯೂ ಕೋಟಿ ತಾರೆ ತುಂಬದ ಬಯಲು

ಯಾರದೀ ಮಾಯೆ ಯಾವ ಬಿಂಬದ ನೆರಳು || ಈ ಬಾನು ||ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ

ಹುಡುಕಿದರೆ ಕೀಲಿ ಕೈ ಸಿಗದೆ ಎದೆಯೊಳಗೆ

ತಿಳಿಯದಲೆದರಲ್ಲಿ ಕುಳಿತಿರುವೆ ನೀನೇ

ಎನ್ನುವರು ನನಗೀಗ ಸೋಜಿಗವು ನಾನೇ || ಈ ಬಾನು ||
ಒಂದು ಮುಂಜಾವಿನಲಿ


ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಸೋ ಎಂದು ಶೃತಿ ಹಿಡಿದು ಸುರಿಯುತ್ತಿತ್ತು

ಅದಕೆ ಹಿಮ್ಮೇಳವನೆ ಸೂಸಿ ಬಹ ಸುಳಿಗಾಳಿ

ತೆಂಗು ಗರಿಗಳ ನಡುವೆ ನುಸುಳುತ್ತಿತ್ತು || ಒಂದು ||ಇಳೆ ವೆಣ್ನು ಮೈದೊಳೆದು ಮಕರಂದದರಿಷಿನದಿ

ಹೂ ಮುಡಿದು ಮಧುಮಗಳ ಹೋಲುತ್ತಿತ್ತು

ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ

ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು || ಒಂದು ||ಹುಲ್ಲೆಸಳು ಹೂಕಪಳೆ ಮುತ್ತು ಹನಿಗಳ ಮಿಂಚು

ಸೊಡರಿನಲಿ ಆರತಿಯ ಬೆಳಗುತ್ತಿತ್ತು

ಕೊರಲುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ

ಶುಭಮಸ್ತು ಶುಭಮಸ್ತು ಎನ್ನುತ್ತಿತ್ತು || ಒಂದು ||ತಳಿರ ತೋರಣದಲ್ಲಿ ಬಳ್ಳಿ ಬಾಣಗಳಲ್ಲಿ

ದುಂಬಿಗಳ ಓಂಕಾರ ಹೊಮ್ಮುತ್ತಿತ್ತು

ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ

ಚಿಟ್ಟೆ ರಿಂಗಣದುಣಿತ ಹಾಕುತ್ತಿತ್ತು || ಒಂದು ||ಉಷೆಯ ನುಂಟದಪಿನಲಿ ಹರ್ಷ ಬಾಷ್ಪಗಳಂತೆ

ಮರದ ಹನಿ ತಟಪಟನೆ ಉದುರುತ್ತಿತ್ತು

ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದ ಮನ

ಮುಂಬಾಳ ಸವಿಗನಸ ನೆನೆಯುತ್ತಿತ್ತು || ಒಂದು ||

Friday, May 9, 2008

ಬಾರೋ ವಸಂತ ಬಾರೋ
ಬಾರೋ ವಸಂತ ಬಾರೋ ಬಾ... ಬಾರೋ

ಹೊಸ ಹೊಸ ಹರುಷದ ಹರಿಕಾರ

ಹೊಸ ಭಾವನೆಗಳ ಹೊಸ ಕಾಮನೆಗಳ

ಎದೆಯಲಿ ಬರೆಯುವ ನುಡಿಕಾರ || ಬಾರೋ ||
ಬಾರೋ ಸಂತನೆಗಳ ಕಳಚಿ

ಹೆಜ್ಜೆಗಳಿಗೆ ತಾಳವನುಣಿಸಿ

ದಣಿದ ಮೈಗೆ ತಂಗಾಳಿಯ

ಮನಸಿಗೆ ನಾಳೆಯ ಸುಖದೃಶ್ಯವ ಕಲಿಸಿ || ಬಾರೋ ||
ಮೊಗಚುತ ನೆನ್ನೆಯ ದು:ಖಗಳ

ತೆರೆಯುತ ಹೊಸ ಅಧ್ಯಾಯಗಳ

ಅರಸುತ ಎಲ್ಲರ ಮೇಲು ಕೀಳಿರದೆ

ಕಲಿಸುತ ಭವಿಷ್ಯದಾಸೆಗಳ || ಬಾರೋ ||
ಎಳೆ ಕಂದನ ದನಿ ಗೆಜ್ಜೆಯಲಿ

ಇನಿಯಳ ಮಲ್ಲಿಗೆ ಲಜ್ಜೆಯಲಿ

ಗೋಳು ಬಾಳಿನಲಿ ಹಸಿರ ಚಿಮ್ಮಿಸುವ

ಸೃಷ್ಟಿ ಶೀಲ ಹೊಸ ಹೆಜ್ಜೆಯಲಿ || ಬಾರೋ ||


Wednesday, May 7, 2008

ಸಂಜೆಯ ರಾಗಕೆ


ಸಂಜೆಯ ರಾಗಕೆ ಬಾನು ಕೆಂಪೇರಿದೆ

ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ

ಈಗ ರಂಗೇರಿದೆ || ಸಂಜೆಯ ||ಮರಗಿಡ ನೆಲದ ಮೇಲೆ ನೆರಳನು ಹಾಸಿದೆ

ಹೂಗಳ ದಳಗಳ ನಡುವೆ ನಿನದೇ ಬೆರಳಿದೆ || ಸಂಜೆಯ ||ಗಾಳಿಯ ಜೊತೆಯ ಗಂಧವು ನಿನ್ನನ್ನು ಸವರಿದೆ

ಒಳಗೂ ಹೊರಗೂ ವ್ಯಾಪಿಸಿ ಯೌವ್ವನ ಕೆರಳಿದೆ || ಸಂಜೆಯ ||ಕೊಳದಲಿ ಮೂಡಿದ ಬಿಂಬವು ಹೂಗಳ ಮರೆಸಿದೆ

ಕಣ್ಣಲಿ ಎಂತಹ ಕನಸಿನ ಲೋಕವು ತೆರೆದಿದೆ || ಸಂಜೆಯ ||


Monday, May 5, 2008

ಮತ್ತದೇ ಬೇಸರ

ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ

ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ || ಮತ್ತದೇ ||ಕಣ್ಣನೇ ತಣಿಸುವ ಈ ಪಡುವಣ ಬಾನ್ ಬಣ್ಣಗಳು

ಮಣ್ಣನೇ ಹೊನ್ನಿನ ಕಣ್ಣಾಗಿಸುವೀ ಕಿರಣಗಳು

ಮತ್ತದೇ ಹಸುರಿಗೆ ಹಸೆಯಿಡುತಿರುವೀ ಪದಗಾನ

ಚಿನ್ನ ನೀನಿಲ್ಲದೆ ದಿಂ ಎನ್ನುತಿದೆ ರಮ್ಯೋದ್ಯಾನ || ಮತ್ತದೇ ||ಆಸೆಗಳ ಹಿಂಡಿನ ತುಡಿತಕ್ಕೆ ಹೊಲ ನನ್ನೀ ದೇಹ

ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ

ಮುತ್ತಿಗಾಲಸ್ಯವ ಬಿಗಿ ಮೌನವ ಹೊಡೆದೋಡಿಸುವ

ಮತ್ತೆ ಆ ಸಮತೆಯ ಇರಿಬೇಲಿಯ ಸರಿ ನೆಲೆಸುವ || ಮತ್ತದೇ ||

ಜೋಗದ ಸಿರಿ ಬೆಳಕಿನಲ್ಲಿ


ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ

ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ

ನಿತ್ಯಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ

ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ

ನಿತ್ಯೋತ್ಸವ ತಾಯೆ ನಿತ್ಯೋತ್ಸವ || ಜೋಗದ ||ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ

ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ

ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಬಿತ್ತಿಗಳಲಿ

ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ

ನಿತ್ಯೋತ್ಸವ ತಾಯೆ ನಿತ್ಯೋತ್ಸವ || ಜೋಗದ ||ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ

ಸದ್ವಿಕಾಸ ಶೀಲ ನುಡಿಯ ಲೋಕಾವೃತ ಸೀಮೆಯೆ

ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ

ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ

ನಿತ್ಯೋತ್ಸವ ತಾಯೆ ನಿತ್ಯೋತ್ಸವ || ಜೋಗದ ||

Sunday, April 20, 2008

ಅತ್ತಿತ್ತ ನೋಡದಿರು


ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು

ನಿದ್ದೆ ಬರುವಳು ಹೊದ್ದು ಮಲಗು ಮಗುವೇ

ಜೋ ಜೋಜೋಜೋ...

ಸುತ್ತಿ ಹೊರಳಾಡದಿರು ಮತ್ತೆ ಹಟ ಹೂಡದಿರು

ನಿದ್ದೆ ಬರುವಳು ಕದ್ದು ಮಲಗು ಮಗುವೇ

ಜೋ ಜೋಜೋಜೋ..ಮಲಗು ಚೆಲ್ವಿನ ತೆರೆಯೆ ಮಲಗು ಒಲ್ಮೆಯ ಸಿರಿಯೆ

ಮಲಗು ತೊಟ್ಟಿಲ ಸಿರಿಯೆ ದೇವರಂತೆ

ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ

ಮಲಗು ಚಂದಿರನೂರ ಕೂಗುವೆಯಂತೆ || ಅತ್ತಿತ್ತ ||ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ

ಚಂದಿರನ ತಂಗಿಯರು ನಿನ್ನ ಕರೆದು

ಹೂವ ಮುಡಿಸುವರಂತೆ ಹಾಲ ಕುಡಿಸುವರಂತೆ

ವೀಣೆ ನುಡಿಸುವರಂತೆ ಸುತ್ತ ನೆರೆದು || ಅತ್ತಿತ್ತ ||ಬಣ್ಣ ಬಣ್ಣದ ಕನಸು ಕರಗುವುದು ಬಲು ಬೇಗ

ಹಗಲು ಬರುವನು ಬೆಳ್ಳಿ ಮುಗಿಲ ನಡುವೆ

ಚಿನ್ನದಂಬಾರಿಯಲಿ ನಿನ್ನ ಅಳುಕು ವರಾಮ

ಪಟ್ಟದಾನೆಯ ಮೇಲೆ ಪುಟ್ಟ ಮಗುವೆ || ಅತ್ತಿತ್ತ ||Monday, April 14, 2008

ಅಂತರ ತಮ ನೀ ಗುರುಅಂತರತಮ ನೀ ಗುರು

ಹೇ ಆತ್ಮ ತಮೋಹಾರಿ || ಅಂತರ ತಮ ||ಜಟಿಲ ಕುಟಿಲ ತಮ ಅಂತರಂಗ

ಬಹು ಭಾವ ವಿಪಿನ ಸಂಚಾರಿ || ಅಂತರ ತಮ ||ಜನುಮ ಜನುಮ ಶತ ಕೋಟಿ ಸಂಸ್ಕಾರ

ಪರಮ ಚರಮ ಸಂಸ್ಕಾರಿ || ಅಂತರ ತಮ ||ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ

ರೂಪ ಅರೂಪ ವಿಹಾರಿ || ಅಂತರ ತಮ ||ತಪ್ಪಿ ಹೋಯಿತಲ್ಲೇ


ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು

ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು

ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ

ಮುರಿದು ಹೋಯಿತೇ ಈಗ ಆ ಪುಟ್ಟ ಗೂಡು || ತಪ್ಪಿ ||ಹನಿ ಹನಿಯಾಗಿ ಕೊನೆಗೂ ಕೂಗಿದ ಪ್ರೀತಿ

ಹರಿದು ಚೂರಾಯಿತೆ ಎದೆಯ ಒಲವಿನ ಬೀಡು

ರೆಕ್ಕೆ ಬಡಿದೊತ್ತಿ ಎತ್ತಿಕೊಳ್ಳುವ ಹಕ್ಕಿ

ಹಾಡಿನ ಜಾಡು ಹಿಡಿಯುತ್ತಾ ನನ್ನ ಪಾಡು || ತಪ್ಪಿ ||ಎಲ್ಲಿ ಹೋಯಿತು ವಲಸೆ ಗೂಡು ತೊರೆದ ಹಕ್ಕಿ

ಸೇರಿ ಹೋಯಿತೆ ನೀಲಿ ಮುಗಿಲ ಮರೆಯ ನಾಡು

ಹಾಡ ನೆನಪಿಗೆ ಹಿಂಡಿ ತೆವಳುತಿದೆ ಜೀವ

ಮುಂದೆ ಬಯಲು ಹಿಂದೆ ಬಿದ್ದಿತು ಕಾಡು ಮೇಡು || ತಪ್ಪಿ ||

Saturday, April 12, 2008

ತೊರೆದು ಹೋಗದಿರೊ ಜೋಗಿ

ತೊರೆದು ಹೋಗದಿರೊ ಜೋಗಿ

ಅಡಿಗೆರಗಿದ ಈ ದೀನಳ ಮರೆತು ಸಾಗುವೆ ಏಕೆ ವಿರಾಗಿಪ್ರೇಮ ಹೋಮದ ಪರಿಮಳ ಪಥದಲಿ ಸಲಿಸು ದೀಕ್ಷೆ ಎನಗೆ

ನಿನ್ನ ವಿರಹದಲಿ ಒರೆದು ಹೋಗಲು ಸಿದ್ಧಳಿರುವ ನನಗೆ || ತೊರೆದು ||ಹೂಡುವೆ ಗಂಧದ ಚಿತೆಯ ನಡುವೆ ನಿಲುವೆ ನಾನೇ

ಉರಿ ಸೋಕಿಸು ಪ್ರಭುವೆ ಚಿತೆಗೆ ಪ್ರೀತಿಯಿಂದ ನೀನೇ || ತೊರೆದು ||ಉರಿದು ಉಳಿವೆನು ಬೂಧಿಯಲಿ ಲೇಪಿಸಿಕೋ ಅದ ಮೈಗೆ

ಮೀರಾ ಪ್ರಭು ಗಿರಿಧರನೇ ಜ್ಯೋತಿಯು ಜ್ಯೋತಿಯ ಸೇರಲಿ ಹೀಗೆ || ತೊರೆದು ||
Monday, April 7, 2008

ಓ ನನ್ನ ಚೇತನ


ಓ ನನ್ನ ಚೇತನ ಆಗು ನೀ ಅನಿಕೇತನರೂಪರೂಪಗಳನು ದಾಟಿ

ನಾಮ ಕೋಟಿಗಳನು ಮೀಟಿ

ಎದೆಯ ಬಿರಿಯೆ ಭಾವ ದೀಟಿ || ಓ ನನ್ನ ||ನೂರು ಮತದ ಹೊಟ್ಟತೂರಿ

ಎಲ್ಲ ತತ್ವದೆಲ್ಲೆ ಮೀರಿ

ನಿರ್ದಿಗಂತವಾಗಿ ಏರಿ || ಓ ನನ್ನ ||ಎಲ್ಲಿಯೂ ನಿಲ್ಲದಿರು

ಮನೆಯನೆಂದು ಕಟ್ಟದಿರು

ಕೊನೆಯನೆಂದು ಮುಟ್ಟದಿರು || ಓ ನನ್ನ ||ಅನಂತ ತಾನನಂತವಾಗಿ

ಆಗುತಿಹನೆ ನಿತ್ಯಯೋಗಿ

ಅನಂತ ನೀ ಅನಂತವಾಗು

ಆಗು ಆಗು ಆಗು ಆಗು || ಓ ನನ್ನ ||


Sunday, April 6, 2008

ಎಲ್ಲಾ ನಿನ್ನ ಲೀಲೆ ತಾಯೆ


ಎಲ್ಲಾ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ

ನಿನ್ನ ಅಲ್ಲಗಳೆದ ನಮ್ಮ ಕರುಣೆಯಿಂದ ಕಾಯೆ || ಎಲ್ಲ ||ಕಾರಿರುಳನು ಸೀಳಿ ಬರುವ ನಿಗಿ ನಿಗಿ ಉರಿ ಹರಳು

ನೀಲಿ ನಭದ ಹಾಸಿನಲ್ಲಿ ಮಣಿಗೇಯುವ ಇರುಳು

ಋತುವಿರದೆ ಮುಗಿಲ ಗಡಿಗೆ ಉರುಳಿ ಸುರಿವ ಜಲವು || ಎಲ್ಲ ||ಸಿಂಗಾರದ ನಡಿಗೆಯಲ್ಲಿ ನದಿಯ ರೀತಿ ಹರಿವೆ

ಮಂಗಳಮಯ ಶಾಲಿವನದ ಸೆರಗ ಹೊದ್ದು ನಿಲುವೆ

ಬಂಗಾರದ ಸಂಜೆಯಲ್ಲಿ ಒಂದೇ ಕ್ಷಣ ಸಿಳುವೆ || ಎಲ್ಲ ||

Saturday, April 5, 2008

ಕಾಣದ ಕಡಲಿಗೆ


ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣಬಲ್ಲೆನೆ ಒಂದು ದಿನ ಕಡಲೊಳು

ಕೂಡಬಲ್ಲೆನೆ ಒಂದು ದಿನ || ಕಾ ||ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ

ನನ್ನ ಕಲ್ಪನೆಯು ತನ್ನ ಕಡಲನೆ ಛಿದ್ರಿಸಿ ಚಿಂತಿಸಿ ಸುರಿಯುತಿದೆ

ಎಲ್ಲಿರುವುದೋ ಅದು ಎಂತಿರುವುದೋ ಅದು

ನೋಡಬಲ್ಲೆನೆ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ || ಕಾಣದ ||ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಾಗಿಹುದಂತೆ

ಸುನಿಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ ತಾನಂತೆ

ಮುನ್ನೀರಂತೆ ಅಪಾರವಂತೆ

ಕಾಣಬಲ್ಲೆನೆ ಒಂದು ದಿನ ಅದರೊಳು ಕರಗಲಾರೆನೆ ಒಂದು ದಿನ || ಕಾಣದ ||ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು

ಎಂದಿಗಾದರೂ ಕಾಣದ ಕಡಲಿಗೆ ಸೇರಬಲ್ಲೆ ನೀನು

ಸೇರಬಹುದೇ ನಾನು ಕಡಲ ನೀಲಿಯೊಳು ಕರಗಬಹುದೇ ನಾನು || ಕಾಣದ ||

ಎಲ್ಲಿ ಜಾರಿತೋ

ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ


ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ || ಎಲ್ಲಿ ||ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ

ದಾಟಿ ಬಂತು ಬೇಲಿಸಾಲ ಮೀಟಿ ಹಳೆಯ ಮಧುರ ನೋವ || ಎಲ್ಲಿ ||ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೋರೆ

ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ || ಎಲ್ಲಿ ||ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪೋ

ಬಂದು ಚೀರುವೆದೆಯ ಭಾವ ಹೇಳಲಾರೆ ತಾಳಲಾರೆ || ಎಲ್ಲಿ ||

Friday, April 4, 2008

ಯಾವ ಮೋಹನ ಮುರಳಿ ಕರೆಯಿತುಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನ್ನು

ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು || ಯಾವ ||ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ

ಬಯಕೆ ತೋಟದ ಬೇಲಿಯೊಳಗೆ ಕರಣ ಕಣದಿ ರಿಂಗಣ || ಯಾವ ||ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ

ಒಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ || ಯಾವ ||ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ

ಯಾವ ಮೋಹನ ಮುರಳಿ ಕರೆಯಿತು ಇದ್ದಕ್ಕಿದ್ದೆಡೆ ನಿನ್ನನ್ನು

ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು || ಯಾವ ||
ನೀ ಸಿಗದೆ


ನೀ ಸಿಗದೆ ಬಾಳೊಂದು ಬಾಳೇ ಕೃಷ್ಣ

ನಾ ತಾಳಲಾರೆ ಈ ವಿರಹ ಕೃಷ್ಣ || ನೀ ||ಕಮಲವಿಲ್ಲದ ಕೆರೆ ನನ್ನ ಬಾಳು

ಚಂದ್ರನಿಲ್ಲದ ರಾತ್ರಿ ಬೀಳು

ನೀ ಸಿಗದೆ ಉರಿ ಉರಿ ಕಳೆದೆ ಇರುಳ

ಮಾತೆಲ್ಲ ಬಿಗಿದಿದೆ ದು:ಖ ಕೊರಳ || ನೀ ||ಅನ್ನ ಸೇರದು ನಿದ್ದೆ ಬಂದಿಹುದೆಂದು

ಕುದಿವೆ ಒಂದೇ ಸಮ ಕೃಷ್ಣ ಎಂದು

ಕೃಷ್ಣ ....

ಯಾರು ಅರಿವರೋ ಹೇಳು ನನ್ನ ನೋವ

ತಲ್ಲಣಿಸಿ ಕೂಗುತಿದೆ ದಾಸಿ ಜೀವ || ನೀ ||ಒಳಗಿರುವ ಗಿರಿಧರನೇ ಹೊರಗೆ ಬಾರೋ

ಕಣ್ಣೆದುರು ನಿಂತು ಆ ರೂಪ ತೋರೋ

ಜನುಮ ಜನುಮದ ರಾಗ ನನ್ನ ಪ್ರೀತಿ

ನಿನ್ನೊಳಗೆ ಹರಿವುದೇ ಅದರ ರೀತಿ || ನೀ ||

Thursday, April 3, 2008

ಎದೆ ತುಂಬಿ ಹಾಡಿದೆನು


ಎದೆ ತುಂಬಿ ಹಾಡಿದೆನು ಅಂದು ನಾನು

ಮನವಿಟ್ಟು ಕೇಳಿದಿರಿ ಅಲ್ಲಿ ನೀವು || ಎದೆ ||ಇಂದು ನಾ ಹಾಡಿದರೂ ಅಂದಿನಂತೆಯೆ ಕುಳಿತು

ಕೇಳುವಿರಿ ಸಾಕೆನಗೆ ಅದುವೆ ಬಹುಮಾನ

ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ || ಎದೆ ||ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ

ಹಾಡುವುದು ಅನಿವಾರ್ಯ ಕರ್ಮ ನನಗೆ

ಕೇಳುವವರಿಹರೆಂದು ನಾ ಬಲ್ಲೆನದರಿಂದ

ಹಾಡುವೆನು ಮೈದುಂಬಿ ಎಂದಿನಂತೆ

ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆಎದೆ ತುಂಬಿ ಹಾಡಿದೆನು ಇಂದು ನಾನು

ಮನವಿಟ್ಟು ಕೇಳಿದಿರಿ ಇಲ್ಲಿ ನೀವು..


ಅಮ್ಮ ನಾನು ದೇವರಾಣೆ

ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ


ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ || ಅಮ್ಮ ||ನೀನೇ ನೋಡು ಬೆಣ್ಣೆ ಗಡಿಗೆ ಸೂಲಿನ ನೆಲುವಲ್ಲಿ

ಹೇಗೆ ತಾನೆ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ || ಅಮ್ಮ ||ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ

ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ || ಅಮ್ಮ ||ಎತ್ತಿದ ಕೈಯ ಕಡಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ

ಸೂರದಾಸ ಪ್ರಿಯಶಾಮನ ಶಾಮನ ...

ಸೂರದಾಸ ಪ್ರಿಯಶಾಮನ ಮುತ್ತಿಟ್ಟು ನಕ್ಕಳು ಗೋಪಿ || ಅಮ್ಮ ||


Wednesday, April 2, 2008

ನೀನಿಲ್ಲದೆ ನನಗೇನಿದೆ

ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿನೀನಿಲ್ಲದೆ ನನಗೇನಿದೆ

ಮನಸೆಲ್ಲಾ ನಿನ್ನಲ್ಲೆ ನೆಲೆಯಾಗಿದೆ

ಕನಸೆಲ್ಲಾ ಕಣ್ಣಲ್ಲೆ ಸೆಲೆಯಾಗಿದೆ || ನೀ ||ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೆ ನಾನು

ಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನು

ಎದೆಯಾಸೆ ಏನು ಎಂದು ನೀ ಕಾಣದಾದೆ

ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ

ಬೆಳಕೊಂದೆ ನಿನ್ನಿಂದ ನಾ ಬಯಸಿದೆ || ನೀ ||ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ

ಒಳಗಿರುವ ಎದೆ ನೆಲದಲ್ಲಿ ಭರವಸೆಯ ಜೀವ ಹರಿಸಿ

ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು

ಹೊಸ ಜೀವ ನಿನ್ನಿಂದ ನಾ ತಾಳುವೆ

ಹೊಸ ಲೋಕ ನಿನ್ನಿಂದ ನಾ ಕಾಣುವೆ || ನೀ ||


Tuesday, April 1, 2008

ಅಂತರಂಗದ ಮೃದಂಗಅಂತರಂಗದ ಮೃದಂಗ ಅಂತು ತೋಂ ತನಾನ

ಚಿತ್ತ ತಾಳ ಬಾರಿಸುತಲಿದ್ದು ಝಂ ಝಣಣ ನಾ

ನೆನಪು ತಂತಿ ಮೀಟುತಿತ್ತು ತೋಂತನನ ತಾನ ತೋಂತನನ ತಾನ ತೋಂತನನ ತಾನ ನಹಲವು ಜನ್ಮದಿಂದ ಬಂದ ಯಾವುದೋನೋ ಧ್ಯಾನ

ಏಕನಾದದಂಥದೊಂದು ತಾನದ ವಿತಾನ

ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ || ೩ || || ಅಂ ||ಕಲ್ಪದಾದಿಯಲ್ಲಿ ನನ್ನ ನಿನ್ನ ವಿರಹವಾಗಿ

ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ

ಮರೆವೆಗೊಂದು ಬಿದ್ದೆ ನಾನು ನೆಲದ ಮಣ್ಣು ತಾಗಿ || ೩ || || ಅಂ ||ಕತ್ತಲಲ್ಲಿ ಬೆಳಕು ಮಿಂಚಿ ಪಡೆತಿತೇಳು ಬಣ್ಣ

ಮೂಕ ಮೌನ ತೂಕ ಮೀರಿ ದನಿಯು ಹಬ್ಬಿತಣ್ಣ

ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ || ೩ || || ಅಂ ||

Monday, March 31, 2008

ದೀಪವು ನಿನ್ನದೆ

ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ
ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು

ಕಡಲು ನಿನ್ನದೆ ಹಡಗು ನಿನ್ನದೆ ಮುಳುಗದಿರಲಿ ಬದುಕು || ದೀ ||ಬೆಟ್ಟವು ನಿನ್ನದೆ ಬಯಲು ನಿನ್ನದೆ ಹಬ್ಬಿನದಲಿ ಪ್ರೀತಿ

ನೆಳಲೊ ಬಿಸಿಲೊ ಎಲ್ಲವು ನಿನ್ನದೆ ಇರಲಿ ಏಕ ರೀತಿ || ದೀ ||ಆಗೊಂದು ಸಿಡಿಲು ಈಗೊಂದು ಮುಗಿಲು ನಿನಗೆ ಅಲಂಕಾರ

ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು ನಿನಗೆ ನಮಸ್ಕಾರ || ದೀ ||ಅಲ್ಲಿ ರಣದುಂದುಭಿ ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ

ಆ ಮಹಾಕಾವ್ಯ ಈ ಭಾವಗೀತೆ ನಿನ್ನ ಪದ ಧ್ವನಿಯೆ || ದೀ ||

ಲೋಕದ ಕಣ್ಣಿಗೆ

ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು

ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣುತಿಂಗಳ ರಾತ್ರಿ ತೊರೆಯ ಸಮೀಪ

ಉರಿದರೆ ಯಾವುದೋ ದೀಪ

ಯಾರೋ ಮೋಹನ ಯಾವ ರಾಧೆಗೋ

ಪಡುತಿರುವನು ಪರಿತಾಪ || ಲೋ ||


ನಾನು ನನ್ನದು ನನ್ನವರೆನ್ನುವ

ಹಲವು ತೊಡಕುಗಳ ಮೀರಿ

ಧಾವಿಸಿ ಸೇರಲು ಬೃಂದಾವನವ

ರಾಧೆ ತೋರುವಳು ದಾರಿ || ಲೋ ||


ಮಹಾಪ್ರವಾಹ ಮಹಾಪ್ರವಾಹ ಮಹಾಪ್ರವಾಹ ಮಹಾಪ್ರವಾಹ

ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ

ತೊರೆದರೂ ತನ್ನ ತೊರೆಯನು ಪ್ರಿಯನ

ರಾಧೆಯ ಪ್ರೀತಿಯ ರೀತಿ ಇದು || ೨|| || ಲೋ ||

COMMENTS