For proper results, open this webpage in Internet Explorer

Saturday, February 13, 2010

ದೂರ ಬಹು ದೂರ

ದೂರ ಬಹು ದೂರ ಹೋಗುವ ಬಾರ

ಅಲ್ಲಿಹುದೆಮ್ಮ ಊರ ತೀರ || ದೂರ ||



ಜಲಜಲದಲೆಗಳ ಮೇಲ್ಕುಣಿದಾಡಿ

ಪಳಲಿಕೆ ತೊಳಲಿಕೆಗಳನೆಲ್ಲ ದೂಡಿ

ಗೆಲುವಿನ ಉಲಿಗಳ ಹಾಡಿ ಒಲುಮೆಯ ಮಾತಾಡಿ ಹಕ್ಕಿಗಳಿಂಚರ ಕೇಳಿ

ಆನಂದವ ತಾಳಿ || ದೂರ ||



ಹಿಮಮಣಿ ಕಣಗಣ ಸಿಂಚಿತ ಅಂಚಿನ

ಹಸುರಿನ ತೀರದ ಮೇಲಾಡಿ

ಇಸಲೆಯ ಕಂಪನದಿಂಪನು ನೋಡಿ

ಕೂಡಿ ಆಡಿ ನೋಡಿ ಹಾಡಿ ತೇಲಿ ತೇಲಿ ಹೋಗುವ ಬಾರ

ಅಲ್ಲಿಹುದೆಮ್ಮ ಊರ ತೀರ || ದೂರ ||

1 comment:

ಕನಸು.. said...

ದಯವಿಟ್ಟು 'ಮತ್ತೆ ಮಳೆ ಹೊಯ್ಯುತಿದೆ, ಎಲ್ಲ ನೆನಪಾಗುತಿದೆ' ಕವಿತೆ ಸಿಕ್ಕರೆ ಪ್ರಕಟಿಸಿ.. ಕವಿ ಯಾರಂತ ಗೊತ್ತಿಲ್ಲ.ಬಹಳ ವರ್ಷಗಳಿಂದ ಹುಡುಕ್ತಿದಿನಿ. ಸಂಗ್ರಹಿತ ಕವನಗಳಿಗೆ ನನ್ನ ಬ್ಲಾಗಿಗೂ ಭೇಟಿ ಕೊಡಿ : ಕನ್ನಡಕಾವ್ಯಕಣಜ.

ಧನ್ಯವಾದಗಳು..

COMMENTS