For proper results, open this webpage in Internet Explorer

Saturday, October 25, 2008

ಬಂದರೂ ಬಾರದ ಹಾಗೇ

ಬಂದರೂ ಬಾರದ ಹಾಗೇ ಯಾಕೆ ಸುಮ್ಮನೆ ನಾವು

ಹಾದಿ ಕಾಯುತ್ತೇವೋ

ಬಂದರು ಬಾರದ ಹಾಗೇ ಇರುವಂಥವರ!



ಒಳಗಿನ ಬೆಂಕಿ ನಾಲಿಗೆಯ ಮೇಲಾಡಿ

ಕಣ್ಣ ಕೊನೆಯಿಂದ ಕಿಡಿಕಾರಿ

ಚಟಪಟ ಸಿಡಿದುಹೊರಟು ಹೋದವರ

ಕಾಯುತ್ತೇವೆ ಯಾಕೆ?

ಹೊಡೆದುಕೊಳ್ಳುವ ಹೃದಯವ ಅಂಗೈಲಿಟ್ಟುಕೊಂಡು




ಇಲ್ಲವೇ ನಿಮ್ಮಲ್ಲಿ? ಇರಲಿ ಬಿಡಿ

ಬಂದಾರು; ಸರಿ. ಬಂದರೆ ತಿಳಿಸುವೆ,

ಬಂದರೆಂದು.

(ಆಚೆ ದನಿಗೇನು ಗೊತ್ತು ಬಾರದೆಯು ಇರಬಹುದೆಂದು)



ಇನ್ನೇನು ಮುಗಿಯುತ್ತದೆ ಕಾದು ಕೂರವ ಹೊತ್ತು,

ಯಾರಾದರು ಬಂದು ಹೃದಯದ ಬಾಗಿಲ ಬಡಿದು

ತಿಳಿಸಿಬಿಡಲಿ.



ಏನ ಕಾಯುತ್ತೇವೆ? ಯಾಕೆ ಕಾಯುತ್ತೇವೆ?

ಬರುವುದನ್ನೋ? ಬಾರದಿರುವುದನ್ನೋ?



ತೆರೆದ ಬಾಗಿಲಿನಿಂದ ಕತ್ತಲು ನುಗ್ಗಿದ ಹಾಗೆ

ಕಡೆಗೂ ಬಂದರೂ ಬಾರದ ಹಾಗೇ!!!!!!

1 comment:

SATHYA UDUPI said...

ಬಂದರೂ ಬಾರದ ಹಾಗೆ ಈ ಕವಿತೆಯನ್ನು ಬರೆದವರು ಯಾರು ಎಂದು ತಿಳಿಸಿ

COMMENTS