
ಮುಚ್ಚು ಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೇ ಅಂತರಾತ್ಮ || ಮುಚ್ಚು ||
ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೆ ಪಾಪವಾಗಿ
ಗಂಗೆ ತಾನೋದ್ಭವಿಪ ನಿನ್ನಡಿಯ ಸೋಕಿಂಗೆ
ನರಕ ತಾನುಳಿಯುವುದೆ ನರಕವಾಗಿ || ಮುಚ್ಚು ||
ಶಾಂತ ರೀತಿಯೊಳಿಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೊ ಓ ಅನಂತ
ನನ್ನ ನೀತಿಯ ಪುರುಡಿನಿಂದೆನ್ನ ರಕ್ಷಿಸೆ
ನಿನ್ನ ನೀತಿಯ ಬೆಳಕಿನ ಆನಂದಕ್ಕೆ || ಮುಚ್ಚು ||
No comments:
Post a Comment