For proper results, open this webpage in Internet Explorer

Monday, May 5, 2008

ಮತ್ತದೇ ಬೇಸರ

ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ

ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ || ಮತ್ತದೇ ||



ಕಣ್ಣನೇ ತಣಿಸುವ ಈ ಪಡುವಣ ಬಾನ್ ಬಣ್ಣಗಳು

ಮಣ್ಣನೇ ಹೊನ್ನಿನ ಕಣ್ಣಾಗಿಸುವೀ ಕಿರಣಗಳು

ಮತ್ತದೇ ಹಸುರಿಗೆ ಹಸೆಯಿಡುತಿರುವೀ ಪದಗಾನ

ಚಿನ್ನ ನೀನಿಲ್ಲದೆ ದಿಂ ಎನ್ನುತಿದೆ ರಮ್ಯೋದ್ಯಾನ || ಮತ್ತದೇ ||



ಆಸೆಗಳ ಹಿಂಡಿನ ತುಡಿತಕ್ಕೆ ಹೊಲ ನನ್ನೀ ದೇಹ

ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ

ಮುತ್ತಿಗಾಲಸ್ಯವ ಬಿಗಿ ಮೌನವ ಹೊಡೆದೋಡಿಸುವ

ಮತ್ತೆ ಆ ಸಮತೆಯ ಇರಿಬೇಲಿಯ ಸರಿ ನೆಲೆಸುವ || ಮತ್ತದೇ ||

3 comments:

Rupesh said...

ಉತ್ತಮ ಪ್ರಯತ್ನ. ಅಭಿನಂದನೆಗಳು. ಆದರೆ ದಯವಿಟ್ಟು ಭಾವಗೀತೆಗಳ ಸಾಹಿತ್ಯವನ್ನು ಅದರ ಮೂಲದಲ್ಲಿಯೇ ಅಭ್ಯಸಿಸಿ, ನಂತರ ಇಲ್ಲಿ ಬ್ಲಾಗಿಸಿದರೆ ಒಳ್ಳೆಯದು. ಇಲ್ಲದಿದ್ದಲ್ಲಿ ನೀವು ತಪ್ಪುತಪ್ಪು ಸಾಹಿತ್ಯ ನೀಡಿ ಇತರರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ. ಈ ಗೀತೆಯಲ್ಲಿಯೇ ಅನೇಕ ತಪ್ಪುಗಳಿವೆ. ಬಹುಶಃ ತಾವು ಧ್ವನಿಸುರುಳಿಯನ್ನೇ ಆಧಾರವಾಗಿಟ್ಟುಕೊಂಡು ಈ ಗೀತೆಯನ್ನು ಪಠ್ಯೀಕರಿಸಿರಬಹುದೆಂದು ಭಾವಿಸುತ್ತೇನೆ. ಪ್ರತಿಯೊಂದು ಪ್ರಯತ್ನದ ಹಿಂದೆ ಸ್ವಲ್ಪ ಸಂಶೋಧನೆ ಅತ್ಯಗತ್ಯ. ನಿಮ್ಮ ಪ್ರಯತ್ನ ಪ್ರಶಂಸನೀಯ. ಗುರುತರವೂ ಆಗಲೆಂದು ಆಶಿಸುತ್ತೇನೆ.
-ರೂಪೇಶ

Rupesh said...

(ಈ ಕೆಳಗೆ ನೀಡಿರುವ ಸಾಹಿತ್ಯ ಧ್ವನಿಸುರುಳಿಯಲ್ಲಿರುವಂತೆ. ಕವನದ ಸಾಹಿತ್ಯದಲ್ಲಿ ಕೆಲವು ಸಣ್ಣ ವ್ಯತ್ಯಾಸಗಳಿವೆ)

ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ

ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ || ಮತ್ತದೇ ||



ಕಣ್ಣನೇ ದಣಿಸುವ ಈ ಪಡುವಣ ಬಾನ್ ಬಣ್ಣಗಳು

ಮಣ್ಣನೇ ಹೊನ್ನಿನ ಹಣ್ಣಾಗಿಸುವೀ ಕಿರಣಗಳು

ಹಚ್ಚನೇ ಹಸುರಿಗೆ ಹಸೆಯಿಡುತಿರುವೀ ಖಗಗಾನ

ಚಿನ್ನ ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ || ಮತ್ತದೇ ||



ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ

ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ

ಮುತ್ತಿದಾಲಸ್ಯವ ಬಿಗಿ ಮೌನವ ಹೊಡೆದೋಡಿಸು ಬಾ

ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲಿಸು ಬಾ || ಮತ್ತದೇ ||

Anonymous said...

ಉತ್ತಮ ಪ್ರಯತ್ನ :)

COMMENTS