For proper results, open this webpage in Internet Explorer

Monday, March 31, 2008

ದೀಪವು ನಿನ್ನದೆ

ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ
ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು

ಕಡಲು ನಿನ್ನದೆ ಹಡಗು ನಿನ್ನದೆ ಮುಳುಗದಿರಲಿ ಬದುಕು || ದೀ ||ಬೆಟ್ಟವು ನಿನ್ನದೆ ಬಯಲು ನಿನ್ನದೆ ಹಬ್ಬಿನದಲಿ ಪ್ರೀತಿ

ನೆಳಲೊ ಬಿಸಿಲೊ ಎಲ್ಲವು ನಿನ್ನದೆ ಇರಲಿ ಏಕ ರೀತಿ || ದೀ ||ಆಗೊಂದು ಸಿಡಿಲು ಈಗೊಂದು ಮುಗಿಲು ನಿನಗೆ ಅಲಂಕಾರ

ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು ನಿನಗೆ ನಮಸ್ಕಾರ || ದೀ ||ಅಲ್ಲಿ ರಣದುಂದುಭಿ ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ

ಆ ಮಹಾಕಾವ್ಯ ಈ ಭಾವಗೀತೆ ನಿನ್ನ ಪದ ಧ್ವನಿಯೆ || ದೀ ||

5 comments:

Ajay Kumar K.S. said...

ಅತ್ಯದ್ಭುತವಾದ ಭಾವಗೀತೆ , ಎದೆ - ಮನ ಮುಟ್ಟು ವಂಥಹಧು

Sathya said...

ಹೌದು. ನನಗೆ ಅತ್ಯಂತ ಪ್ರಿಯವಾದ ಭಾವ ಗೀತೆ.

anuya said...

ಎಲ್ಲಾ ನೋವನ್ನು ಮರೆಸುವ ಹಾಡು,very good

Sathyanarayana.R.G said...

ಸತ್ಯದ ಮಾತು.

Anonymous said...

Thanks for the lyric. Can you please publish the lyric of "AA Neeli Kolavannu preetisuve naanu"?

COMMENTS