For proper results, open this webpage in Internet Explorer

Saturday, February 13, 2010

ಇದೋ ಗಂಗೋತ್ರಿ

ಇದೋ ಗಂಗೋತ್ರಿ ಹೇ ಮಾನಸ ಯಾತ್ರಿ ಇದು ನಕ್ಷತ್ರೇಕ್ಷು

ಸೂಸಿದ ರಸಧಾರಿಗೆ ಸಂಭವಿಸಿಹ ಶೃಂಗ ಸರೋವರ ಚಕ್ಷು || ಇದೋ ||




ಮಾನಸ ಅತಿಮಾನಸಕೇರುವೆಡೆ ಅತಿಮಾನಸ ಮನಸಕಿಳಿಯುವೆಡೆ

ಅಧಿಮಾನಸ ಮೈದೋರುವೆಡೆ ಹೇ ಈ ಗಂಗೋತ್ರಿ

ಭೂಮಂಡಲ ಶತ ಶತ ಆಕಾಂಕ್ಷಿ ನರ ನರ ಹೃದಯದ ಕೋಟಿ ಅಭೀಪ್ಸೆ

ಹರ ಚರಣಕೆ ಏರುವ ಊರ್ಧ್ವಾಷೆ ಈ ತೀರ್ಥ ಕ್ಷೇತ್ರಕೆ ಚಿರ ಯಾತ್ರಿ

ಎಲ್ಲ ತತ್ವಗಳ ಮೂಲನಿಧಿ ಎಲ್ಲ ಚಿಂತನದ ವಾರಿಧಿ ಎಲ್ಲ ನಂಬುಗೆಯ ಅಂಬೋಧಿ

ಈ ಮಧು ಗಂಗೋತ್ರಿ || ಇದೋ ||





ಯಮುನ ಗಂಗ ಕೃಷ್ಣ ತುಂಗ ಮಿಸ್ಸಿಸ್ಸಿಪ್ಪಿ ಅಮೇಜ಼ಾನ್ ಥೇಮ್ಸ್ ಡಾನ್

ಎಲ್ಲ ನದಿಗಳಿಗು ಇಲ್ಲಿಯೇ ಉಗಮ ಎಲ್ಲ ಸಮುದ್ರಗಳೆಲ್ಲ ಶಿಖರಗಳಿಗಿಲ್ಲಿಯೇ ಸಂಗಮ

ಈರುತ ಚಿದ್ಗಂಗೋತ್ರಿ ಇಲ್ಲಿಂದಲೇ ಸಂಭವಿಸುತ ಹರಿಯುತ್ತಿದೆ ಗಾಯತ್ರಿ

ಮರ್ತ್ಯ ಚೇತ ಸದಾ ಹೃದಯ ಹೃದಯದೊಳು ತಾನಾಗುವವರೆಗೂ ಚಿರ ಯಾತ್ರಿ || ಇದೋ ||





ಇದೇ ಮಧು ಗಂಗೋತ್ರಿ ಹೇ ಮಾನಸ ಯಾತ್ರಿ

ಧ್ಯಾನಿಸಿ ನಿಲ್ಲಿಲ್ಲಿ ಸಾಧಿಸಿ ನಿಲ್ಲಿಲ್ಲಿ

ಆ ಲೋಕವನೀ ಲೋಕಕೆ ಸೆಳೆವ ಭಗೀರಥನಾಗಿಲ್ಲಿ

ಈ ಲೋಕವನಾ ಲೋಕಕೆ ಸೇದುವ ಸೇತುವೆಯಾಗಿಲ್ಲಿ

ಅದನಿದಕು ಇದನದಕು ಬಂಧಿಸಿ ನೈದೊಂದಾಗಿಪ

ಋಷಿ ಮಾನವರಸ ಚೇತನ ವಿದ್ಯುತ್ವಾಹಕವಾಗಿಲ್ಲಿ || ಇದೋ ||



ನಾನು ಬಡವಿ ಆತ ಬಡವ

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು

ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು || ನಾನು ||




ಹತ್ತಿರಿರಲಿ ದೂರವಿರಲಿ ಅವನೇ ರಂಗಸಾಲೆ

ಕಣ್ಣು ಕಟ್ಟುವಂಥ ಮೂರ್ತಿ ಕಿವಿಗೆ ಮೆಚ್ಚಿನೋಲೆ || ನಾನು ||




ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು

ತೋಳುಗಳಿಗೆ ತೋಳಬಂಧಿ ಕೆನ್ನೆತುಂಬ ಮುತ್ತು || ನಾನು ||




ಕುಂದು ಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು

ಹೊಟ್ಟೆಗಿತ್ತ ಜೀವಫಲವ ತುಟಿಗೆ ಹಾಲು ಜೇನು || ನಾನು ||

ಒಂದೇ ಬಾರಿ ನನ್ನ ನೋಡಿ

ಒಂದೇ ಬಾರಿ ನನ್ನ ನೋಡಿ ಮಂದನಗೆ ಹಾಂಗ ಬೀರಿ

ಮುಂದ ಮುಂದ ಮುಂದ ಹೋದ ಹಿಂದ ನೋಡದ

ಗೆಳತಿ ಹಿಂದ ನೋಡದ || ಒಂದೇ ||




ಗಾಳಿ ಹೆಜ್ಜಿ ಹಿಡದ ಸುಗಂಧ ಅತ್ತ ಅತ್ತ ಹೋಗು ಅಂದ

ಹೋತ ಮನಸು ಅವನ ಹಿಂದ

ಹಿಂದ ನೋಡದ || ಒಂದೇ ||




ನಂದ ನನಗ ಎಚ್ಚರಿಲ್ಲ ಮಂದಿ ಗೊಡವಿ ಏನ ನನಗ

ಒಂದೇ ಅಳತಿ ನಡದದ ಚಿತ್ತ

ಹಿಂದ ನೋಡದ || ಒಂದೇ ||




ಸೂಜಿ ಹಿಂದ ದರದ್ಹಾಂಗ ಕೊಲ್ಲ್ಲದೊಳಗ ಜಾರಿದ್ಹಾಂಗ

ಹೋತ ಹಿಂದ ಬಾರದ್ಹಾಂಗ

ಹಿಂದ ನೋಡದ || ಒಂದೇ ||

ಬಾ ಸವಿತ

ಬಾ ಸವಿತಾ ಬಾ ಸವಿತಾ ಬಾ ಸವಿತಾ


ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ

ತಿಳಿವಿಗೆ ಬಣ್ಣವ ಹಚ್ಚಿಸಿ ಒಮ್ಮೆ

ಒಳಿತಲ್ಲದುದೆ ಒಳಿತೆಂಬುದರ

ಚಳಕವೆಲ್ಲಕೆ ವಿನಾಶವ ತಾ || ಬಾ ||




ನೆಲೆಯಿಂದ ಹೊರಟು ಅಲೆ

ಛಲ ತೊಟ್ಟ ಮಲ್ಲ ವಾಹಿನಿ ಬಾ

ನಿಲವಿಲ್ಲಾ ಜಗದಿ ಕತ್ತಲೆಗೆಂದು

ಗೆಲವನು ಸಾರುವ ಭಾಸವ ತಾ || ಬಾ ||




ಓಂ ತತ್ ಸವಿತುರ್ವರೇಣ್ಯವೆಂದೆವು

ಅಂತಲ್ಲದೆ ಬೇರೇನನು ನಂಬೆವು

ಪಂಥವ ಬೆಳಗಿಸಿ ನಿರೂಪಿಸಿ ಕಾಂಬೆವು

ಶಾಂತ ಸುಂದರ ಶಿವದಾ ಸವಿತಾ || ಬಾ ||


ದೂರ ಬಹು ದೂರ

ದೂರ ಬಹು ದೂರ ಹೋಗುವ ಬಾರ

ಅಲ್ಲಿಹುದೆಮ್ಮ ಊರ ತೀರ || ದೂರ ||



ಜಲಜಲದಲೆಗಳ ಮೇಲ್ಕುಣಿದಾಡಿ

ಪಳಲಿಕೆ ತೊಳಲಿಕೆಗಳನೆಲ್ಲ ದೂಡಿ

ಗೆಲುವಿನ ಉಲಿಗಳ ಹಾಡಿ ಒಲುಮೆಯ ಮಾತಾಡಿ ಹಕ್ಕಿಗಳಿಂಚರ ಕೇಳಿ

ಆನಂದವ ತಾಳಿ || ದೂರ ||



ಹಿಮಮಣಿ ಕಣಗಣ ಸಿಂಚಿತ ಅಂಚಿನ

ಹಸುರಿನ ತೀರದ ಮೇಲಾಡಿ

ಇಸಲೆಯ ಕಂಪನದಿಂಪನು ನೋಡಿ

ಕೂಡಿ ಆಡಿ ನೋಡಿ ಹಾಡಿ ತೇಲಿ ತೇಲಿ ಹೋಗುವ ಬಾರ

ಅಲ್ಲಿಹುದೆಮ್ಮ ಊರ ತೀರ || ದೂರ ||

ತಾಯೆ ನಿನ್ನ ಮಡಿಲಲಿ

ತಾಯೆ ನಿನ್ನ ಮಡಿಲಲಿ ಕಣ್ಣ ತೆರೆದ ಕ್ಷಣದಲಿ.

ಸೂತ್ರವೊಂದು ಬಿಗಿಯಿತೆಮ್ಮ ಸಂಬಂಧದ ನೆಪದಲಿ || ಪ ||


ಆಕಸ್ಮಿಕವೇನೋ ತಿಳಿಯೆ ನಿನ್ನ ಕಂದನಾದುದು

ಆಕಸ್ಮಿಕ ಹೇಗೆ ನಿನ್ನ ಪ್ರೀತಿ ನನ್ನಾ ಗೆದ್ದುದು

ಗುಣಕೆ ಮಣಿದು ನಾನು ನಿನ್ನ ಚರಣ ತಲಕೆ ಬಿದ್ದುದು || ೧ ||



ಇಲ್ಲಿ ಹರಿವ ಪುಣ್ಯ ಜಲ ಕಣ್ಣ ತೊಳೆವ ಹಸಿರ ಕುಲ

ಮಣ್ಣಿನಿಂದ ಹೋರಾಟ ಗಂಧ ನನ್ನ ಬದುಕ ತೆರೆದವು

ಮೈಯ ಎಲ್ಲ ಕಣ ಕಣದಲು ನಿನ್ನ ಋಣವ ಬರೆದವೂ || ೨ ||



ಇತಿಹಾಸಕು ಹಳೆಯ ನಿನ್ನ ಪರಂಪರೆಗೆ ಹೂಡಿ ನನ್ನಾ

ಸೊನ್ನೆಯಾದ ಮಗುವಿಗೊಂದು ಸಣ್ಣ ಪಾಲು ನೀಡಿದೆ

ನಿನ್ನ ಹಿರಿಯ ಕಂದರಿರುವ ಎಡೆಗೆ ತಂದು ನಿಲಿಸಿದೆ || ೩ ||


Saturday, June 6, 2009

ನಿನ್ನ ಬಾಂದಳದಂತೆ

ನಿನ್ನ ಬಾಂದಳದಂತೆ ನನ್ನ ಮನವಿರಲಿ

ನಿನ್ನ ಸಾಗರದಂತೆ ನನ್ನ ಎದೆಯಿರಲಿ || ನಿನ್ನ ||

ನಿನ್ನ ಸುಗ್ಗಿಯ ತೆರದಿ ನನ್ನ ಸೊಬಗಿರಲಿ

ನಿನ್ನ ಲೀಲೆಯ ತೆರದಿ ನನ್ನ ಬಾಳಿರಲಿ || ನಿನ್ನ ||

ನಿನ್ನ ಬಲವಿರುವಂತೆ ನನ್ನ ಬಲವಿರಲಿ

ನಿನ್ನ ತಿಳಿವಿರುವಂತೆ ನನ್ನ ತಿಳಿವಿರಲಿ || ನಿನ್ನ ||

ನಿನ್ನೊಲ್ಮೆಯಂದದಲಿ ನನ್ನೊಲ್ಮೆಯಿರಲಿ

ನಿನ್ನಳವೆನಗಿರಲಿ ನೀನೇ ನನಗಿರಲಿ || ನಿನ್ನ ||

ನಿನ್ನಾತ್ಮದಾನಂದ ನನ್ನದಾಗಿರಲಿ

ನಿನ್ನೊಳಿರುವ ಶಾಂತಿ ನನ್ನೆದೆಗೆ ಬರಲಿ ||ನಿನ್ನ ||

ನಾನೇ ವೀಣೆ ನೀನೇ ತಂತಿ

ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ

ಮಿಡಿದ ನೆನಲು ರಸದ ಹೊನಲು

ಬಿಂದು ಬಿಂದು ಸೇರಿ ಸಿಂಧು ನಾದ ರೂಪಕ || ನಾನೇ ||



ಭುವನವೆಲ್ಲ ಸವಿಯ ಸೊಲ್ಲ ಕವಿಯ ಗಾನ

ನನ್ನ ನಿನ್ನ ಹೃದಯ ಮೀನ

ಕಲ್ಲಿಜೇನ ಸೊಗದ ಸ್ನಾನ ಅಮೃತ ಪಾನ || ನಾನೇ ||



ತಂತಿ ಇಂಚರದಿ ವಿಪಂಚಿ ರಸ ಪ್ರಳಯಿಸೆ

ನನ್ನ ನಿನ್ನ ಜೀವ ಮಾನ

ತಾನ ತಾನ ತನನ ತಾನ ಪ್ರಾಣ ಪುಳಕಿಸೆ || ನಾನೇ ||

Saturday, October 25, 2008

ಶ್ಯಾನುಬೋಗರ ಮಗಳು

ಶ್ಯಾನುಬೋಗರ ಮಗಳು ತಾಯಿ ಇಲ್ಲದ ಹುಡುಗಿ

ರತ್ನದಂತಹದ ಹುಡುಗಿ ಊರಿಗೆಲ್ಲ

ಬಲು ಜಾಣೆ ಗಂಬಿರೇ ಹೆಸರು ಸೀತಾದೇವಿ

ಹನ್ನೆರಡು ತುಂಬಿಹುದು ಮದುವೆಇಲ್ಲ



ತಾಯಿಇಲ್ಲಾದ ಹೆಣ್ಣು ಮಿಂಚ ಬೀರುವ ಕಣ್ಣು

ಒಮ್ಮೊಂಮ್ಮೆ ಕಣ್ಣೀರು ಸುರಿಸೀಹಿಹುದು

ತಾಯಿ ಎಂದುದುಬಂಧು ತಂಪಾ ನೆರೆಹುವದೆಂದು

ಇಂಥ ಬಾಳಿಗೆ ಹೊಳವೆನಿನ್ನ ಕನಸು ॥ಶ್ಯಾನುಬೋಗರ ಮಗಳು॥



ಅತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ

ನೀರು ತರುವಾಗ ಅವಳ ನೋಡಬೇಕು

ಕರುವಣಡಿಸುವಾಗ ಮಲ್ಲಿಗೆಯ ಬನಧೊಲಗೆ

ಅವಳ ಗಂಡನ ಹೆಸರ ಕೇಳಬೇಕು ॥ಶ್ಯಾನುಬೋಗರ ಮಗಳು॥



ಮೊನ್ನ್ನೆ ತಾವಗೆರೆಯ ಜೋಯಿಸರ ಮೊಮ್ಮಗನು

ಹೆಣ್ಣ ನೋಡಲು ಬಂದ ಅವರ ಮನೆಗೆ

ವ್ಹಿಧಿಕರ ಮನೆಗಳಲ್ಲಿ ಊಟ ಹೊತ್ತಾಗುವದು

ಒಲ್ಲೆ ನೆಂದಳೂ ಸೀತೆ ಕೋಣೆಯೊಳಗ

ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ

ಒಳಗೆ ನಾಂಧಾ ದೀಪಾ ನಂಧಿ ಹೋಗಿ

ಹಲವ ನುಡಿಧುದೂ ಹಲ್ಲಿ ಏಳಳೆನಿದೆ ಮುಂದೆ

ತೆರಳಿದನು ಜಾಯಿಸನು ತಣ್ಣಗಾಗಿ ॥ಶ್ಯಾನುಬೋಗರ ಮಗಳು॥



ಬೆಳಗದ ಕೆರೆಯಾಬಲಿ ನನ್ನ ತಂಗಿಯ ಕಂಡು

ಕನ್ನೆ ತೋರಿದಲಾಂತೆ ಕಾರಣವನು

ಹೊನ್ನೂರ ಕೆರಿಯಿಂದ ಬನ್ದಿದ್ದ ಹೊಸ ಗಂಡು

ತನ್ನ್ನ ಕುದಲಿಗಿನ್ಥ್ತ ಕಪ್ಪು ಎನ್ಧು

ನಮ್ಮೂರಿನ ಅಕ್ಕರೆಯ ಸಕ್ಕರೆಯ ಗೊಂಬೆಯನು

ನೋಡಬೇಕು ಅಂತ ಕಪ್ಪು ಗಂಡು

ಶ್ಯಾನುಬೋಗರ ಮನೆಯ ತೋರಣವೇ ಏಳುವದು

ಬಂದ ದಾರಿಗೆ ಸುಂಕಾ ಇಲ್ಲಯೆನ್ದು ॥ಶ್ಯಾನುಬೋಗರ ಮಗಳು॥



ಶ್ಯಾನುಬೋಗರ ಮಗಳು ತಾಯಿ ಇಲ್ಲದ ಹುಡಿಗಿ

ರತ್ನದನಥಹದ ಹುಡುಗಿ ಊರಿಗೆಲ್ಲ

ಗಂಡು ಸಿಕ್ಕುವದೋಂದು ಕಸ್ಟವಲ್ಲ

ಸರಿಯಾದ ಗನ್ದನೊನ್ದಿಗೆ ಹೆಣ್ಣು ಸುಕವಾಗಿರಲು

ತಡವಾದರೇನಂತೆ ನಸ್ಟಯಿಲ್ಲ

ತಡವಾದರೇನಂತೆ ನಸ್ಟಯಿಲ್ಲ

ತಡವಾದರೇನಂತೆ ನಷ್ಟಯಿಲ್ಲ.

ಆಕಾಶದ ನೀಲಿಯಲ್ಲಿ

ಆಕಾಶದ ನೀಲಿಯಲ್ಲಿ ಚಂದ್ರ ತರೆ ತೊಟ್ಟಿಲಲ್ಲಿ

ಬೆಳಕನಿಟ್ಟು ತೂಗೀದಕೆ

ನಿನಗೆ ಬೇರೆ ಹೆಸರು ಬೇಕೇ

ಸ್ತ್ರೀ.......

ಸ್ತ್ರೀ ಎಂದರೆ ಅಷ್ಟೇ ಸಾಕೆ




ಹಸಿರನುಟ್ಟ ಬೆಟ್ಟ ಗಳಲ್ಲಿ

ಮೋಲ್ ಹಾಲಿನಾ ಹೊಳೆಯನ್ ಈಳಿಸಿ

ಬಯಲ ಹಸಿರ ನಗಿಸಿದಕೆ

ನಿನಗೆ ಬೇರೆ ಹೆಸರು ಬೇಕೇ

ಸ್ತ್ರೀ ಎಂದರೆ ಅಷ್ಟೇ ಸಾಕೆ




ಮರಗಿಡವು ಮೂಂಗೂರುಳನೂ

ತಂಗಳಿಯಾ ಬೆರಾಳ ಸವರಿ

ಹತ್ತಿ ಈಲಾಕಿ ಇಳಿಸಿದಕೆ

ನಿನಗೆ ಬೇರೆ ಹೆಸರು ಬೇಕೇ

ಸ್ತ್ರೀ ಎಂದರೆ ಅಷ್ಟೇ ಸಾಕೆ




ಮನೆ ಮನೆಯಲಿ ದೀಪ ಮೂಡಿಸಿ

ಒತ್ತು ಒತ್ತಿ ಗೆ ಅನ್ನ ಉಣಿಸಿ

ತಂದೆ ಮಗುವ ತಬ್ಬಿದಕೆ

ನಿನಗೆ ಬೇರೆ ಹೆಸರು ಬೇಕೇ

ಸ್ತ್ರೀ ಎಂದರೆ ಅಷ್ಟೇ ಸಾಕೆ

ಎಲ್ಲೋ ಹುಡುಕಿದೆ ಇಲ್ಲದ ದೇವರ

ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ ಸ್ನೇಹಗಳ

ಗುರುತಿಸದಾದೆವು ನಮ್ಮೊಳಗೆ || ಎಲ್ಲೋ ||



ಎಲ್ಲಿದೆ ನಂದನ ಎಲ್ಲಿದೆ ಬಂಧನ

ಎಲ್ಲಾ ಇವೆ ಈ ನಮ್ಮೊಳಗೆ

ಒಳಗಿನ ತಿಳಿಯನು ಕಲಕದೆ ಇದ್ದರೆ

ಅಮೃತದ ಸವಿಯಿದೆ ನಾಲಗೆಗೆ || ಎಲ್ಲೋ ||



ಹತ್ತಿರವಿದ್ದೂ ದೂರ ನಿಲ್ಲುವೆವು

ನಮ್ಮ ಅಹಂಮಿನ ಕೋಟೆಯಲಿ

ಎಷ್ಟು ಕಷ್ಟವೋ ಹೊಂದಿಕೆಯೆಂಬುದು

ನಾಲ್ಕು ದಿನದ ಈ ಬದುಕಿನಲ್ಲಿ || ಎಲ್ಲೋ ||

ಬಂದರೂ ಬಾರದ ಹಾಗೇ

ಬಂದರೂ ಬಾರದ ಹಾಗೇ ಯಾಕೆ ಸುಮ್ಮನೆ ನಾವು

ಹಾದಿ ಕಾಯುತ್ತೇವೋ

ಬಂದರು ಬಾರದ ಹಾಗೇ ಇರುವಂಥವರ!



ಒಳಗಿನ ಬೆಂಕಿ ನಾಲಿಗೆಯ ಮೇಲಾಡಿ

ಕಣ್ಣ ಕೊನೆಯಿಂದ ಕಿಡಿಕಾರಿ

ಚಟಪಟ ಸಿಡಿದುಹೊರಟು ಹೋದವರ

ಕಾಯುತ್ತೇವೆ ಯಾಕೆ?

ಹೊಡೆದುಕೊಳ್ಳುವ ಹೃದಯವ ಅಂಗೈಲಿಟ್ಟುಕೊಂಡು




ಇಲ್ಲವೇ ನಿಮ್ಮಲ್ಲಿ? ಇರಲಿ ಬಿಡಿ

ಬಂದಾರು; ಸರಿ. ಬಂದರೆ ತಿಳಿಸುವೆ,

ಬಂದರೆಂದು.

(ಆಚೆ ದನಿಗೇನು ಗೊತ್ತು ಬಾರದೆಯು ಇರಬಹುದೆಂದು)



ಇನ್ನೇನು ಮುಗಿಯುತ್ತದೆ ಕಾದು ಕೂರವ ಹೊತ್ತು,

ಯಾರಾದರು ಬಂದು ಹೃದಯದ ಬಾಗಿಲ ಬಡಿದು

ತಿಳಿಸಿಬಿಡಲಿ.



ಏನ ಕಾಯುತ್ತೇವೆ? ಯಾಕೆ ಕಾಯುತ್ತೇವೆ?

ಬರುವುದನ್ನೋ? ಬಾರದಿರುವುದನ್ನೋ?



ತೆರೆದ ಬಾಗಿಲಿನಿಂದ ಕತ್ತಲು ನುಗ್ಗಿದ ಹಾಗೆ

ಕಡೆಗೂ ಬಂದರೂ ಬಾರದ ಹಾಗೇ!!!!!!

Thursday, October 23, 2008

ಯಾರು ಜೀವವೆ ಯಾರು ಬಂದವರೊ

ಯಾರು ಜೀವವೆ ಯಾರು ಬಂದವರೊ

ಭಾವನೆಗಳನೇರಿ

ಒಣಗಿದೆನ್ನೆದೆಗೆ ಮಳೆಯ ತಂದವರೊ

ಬಿಸಿಲ ತೆರೆಯ ಸೀಳಿ || ಯಾರು ||



ಬಾನ ನೀಲಿಯಲಿ ಕರಿಬಿಳಿ ಬಣ್ಣದ

ಗಾನ ಚಿಮ್ಮಿದವರೊ

ಕಾನು ಮಲೆಗಳಲಿ ಚಿಗುರು ಹೂವುಗಳ

ಚಪ್ಪರ ಬೆಳೆದವರೊ || ಯಾರು ||



ನಸುಕಿನ ಬೆಳಕನು ಮಂಜಿನ ತೆರೆಯಲಿ

ಜಾಲಿಸಿ ಬಿಡುವವರೊ

ಮಣ್ಣಿನ ಮುಖದಲಿ ಹಸುರಿನ ಸುಂದರ

ಕಣ್ಣ ಬಿಡಿಸಿದವರೊ || ಯಾರು ||



ಯಾರು ಜೀವವೆ ಘಳಿಗೆ ಹಿಂದೆ ಈ

ಮನದಲಿ ಮೂಡಿದರೊ

ಯಾರು ಎಂದು ನಾ ತಿಳಿಯುವ ಮೊದಲೆ

ಕಾಣದೆ ಸರಿದವರೊ || ಯಾರು ||

ಮುಚ್ಚು ಮರೆಯಿಲ್ಲದೆಯೆ



ಮುಚ್ಚು ಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು

ಬಿಚ್ಚಿಡುವೆ ಓ ಗುರುವೇ ಅಂತರಾತ್ಮ

ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ

ಸ್ವೀಕರಿಸು ಓ ಗುರುವೇ ಅಂತರಾತ್ಮ || ಮುಚ್ಚು ||



ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು

ಪಾಪ ತಾನುಳಿಯುವುದೆ ಪಾಪವಾಗಿ

ಗಂಗೆ ತಾನೋದ್ಭವಿಪ ನಿನ್ನಡಿಯ ಸೋಕಿಂಗೆ

ನರಕ ತಾನುಳಿಯುವುದೆ ನರಕವಾಗಿ || ಮುಚ್ಚು ||



ಶಾಂತ ರೀತಿಯೊಳಿಮ್ಮಿ ಕದಡಿರುವುದೆನ್ನಾತ್ಮ

ನಾಂತ ರೀತಿಯು ಅದೆಂತೊ ಓ ಅನಂತ

ನನ್ನ ನೀತಿಯ ಪುರುಡಿನಿಂದೆನ್ನ ರಕ್ಷಿಸೆ

ನಿನ್ನ ನೀತಿಯ ಬೆಳಕಿನ ಆನಂದಕ್ಕೆ || ಮುಚ್ಚು ||

Friday, July 11, 2008

ಅಮ್ಮ ನಿನ್ನ ಎದೆಯಾಳದಲ್ಲಿ

ಕವಿ: ಬಿ ಆರ್ ಲಕ್ಷ್ಮಣ್ ರಾವ್

ನೀವು ಹಾಡನ್ನು ಈಗ ಕೇಳಲು ಇಲ್ಲಿ ಕ್ಲಿಕ್ ಮಾಡಿ - "ಹೊಸ ಅಂಶ"

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು

ಕಡಿಯಾಲೊಲ್ಲೇ ಕರುಳ ಬಳ್ಳಿ

ಒಲವೂಡುತಿರುವ ತಾಯೆ ಬಿಡದ ಭುವಿಯ ಮಾಯೆ.




ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ ದೂಡು ಹೊರಗೆ ನನ್ನ

ಓಟ ಕಲಿವೆ ಒಳನಾಟ ಕಲಿವೆ

ನಾ ಕಲಿವೆ ಊರ್ಧ್ವಗಮನ

ಅಗಾಧ ಗಗನ || ಅಮ್ಮ ನಿನ್ನ ||




ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭರ ಸ್ಥಿತಿಗೆ ತಲುಪಿ ಬ್ರಹ್ಮಾಂಡವನ್ನೇ ಬೆದಕಿ

ಇಂಧನ ತೀದಲು ಬಂದೆ ಬರುವೆನು

ಮತ್ತೆ ನಿನ್ನ ತೊಡೆಗೆ

ಮೂರ್ತ ಪ್ರೇಮದೆಡೆಗೆ || ಅಮ್ಮ ನಿನ್ನ ||

ಆನಂದಮಯ ಈ ಜಗ ಹೃದಯ

ಕವಿ: ರಾಷ್ಟ್ರಕವಿ ಕುವೆಂಪು

ಕವಿಯ ಬಗ್ಗೆ:
ಪೂರ್ತಿ ಹೆಸರು: ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕಾಲ: ಡಿಸೆಂಬರ್ ೨೯, ೧೯೦೪ - ನವೆಂಬರ್ ೧೦, ೧೯೯೪
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀವು ಹಾಡನ್ನು ಈಗ ಕೇಳಲು ಇಲ್ಲಿ ಕ್ಲಿಕ್ ಮಾಡಿ - "ಹೊಸ ಅಂಶ"


ಆನಂದಮಯ ಜಗಹೃದಯ ಏತಕೆ ಭಯ ಮಾಣೋ

ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ

ಆನಂದಮಯ ಜಗಹೃದಯ



ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ

ಸೂರ್ಯನು ಬರಿ ರವಿಯಲ್ಲವೋ ಭ್ರಾಂತಿಯ ಮಾಣೋ

ಆನಂದಮಯ ಜಗಹೃದಯ.



ರವಿವದನವೇ ಶಿವಸದನವೊ ಬರಿ ಕಣ್ಣದು ಮಣ್ಣೋ

ಶಿವನಿಲ್ಲದೆ ಸೌಂದರ್ಯವೇ ಶವ ಮುಖದ ಕಣ್ಣೋ

ಆನಂದಮಯ ಜಗಹೃದಯ.



ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ

ಶಿವಕಾಣದೆ ಕವಿ ಕುರುಡನೋ ಶಿವ ಕಾವ್ಯದ ಕಣ್ಣೋ

ಆನಂದಮಯ ಜಗಹೃದಯ.

Sunday, June 29, 2008

ಘಮ ಘಮ ಘಮಾಡಿಸ್ತಾವ ಮಲ್ಲಿಗೆ

ಕವಿ: ರಾ ಬೇಂದ್ರೆ

ಕವಿಯ ಬಗ್ಗೆ:
ಪೂರ್ತಿ ಹೆಸರು: ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಕಾಲ: ಜನವರಿ ೩೧ ೧೮೯೬ - ೨೧ ಅಕ್ಟೋಬರ್ ೧೯೮೧
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀವು ಹಾಡನ್ನು ಈಗ ಕೇಳಲು ಇಲ್ಲಿ ಕ್ಲಿಕ್ ಮಾಡಿ - "ಹೊಸ ಅಂಶ"

ಘಮ ಘಮ ಘಮಾಡಿಸ್ತಾವ ಮಲ್ಲಿಗೆ

ನೀ ಹೊರಟಿದ್ದೀಗ ಎಲ್ಲಿಗೆ


ತುಳುಕ್ಯಾಡುತ್ತಾವ ತೂಕಡಿಕಿ ಎವಿ ಅಪ್ಪುತ್ತಾವ ಕಣ್ ದುಡುಕಿ

ಕನಸು ತೇಲಿ ಬರುತ್ತಾವ ಹುಡುಕಿ

ನೀ ಹೊರಟಿದ್ದೀಗ ಎಲ್ಲಿಗೆ || ಘಮ ||



ಚಿಕ್ಕಿ ತೋರಿಸ್ತಾವ ಚಾಚಿ ಬೆರಳ ಚಂದ್ರಮ ಕನ್ನಡಿ ಹರಳ

ಮನ ಸೋತು ಆಯಿತು ಮರುಳ

ನೀ ಹೊರಟಿದ್ದೀಗ ಎಲ್ಲಿಗೆ || ಘಮ ||



ನೆರಳಲ್ಲಾಡುತ್ತಾವ ಮರದ ಬುಡಕ್ಕ ಕೆರಿ ತೇರಿ ನೂಗುತ್ತಾವ ದಡಕ್ಕ

ಹಿಂಗ ಬಿಟ್ಟು ಇಲ್ಲಿ ನನ್ನ ನಡಕ

ನೀ ಹೊರಟಿದ್ದೀಗ ಎಲ್ಲಿಗೆ || ಘಮ ||



ನನ್ನ ನಿನ್ನ ಒಂದತನದಾಗ ಹಾಡು ಹುಟ್ಟಿ ಒಂದು ಮನದಾಗ

ಬೆಳದಿಂಗಳಾತು ಬನದಾಗ

ನೀ ಹೊರಟಿದ್ದೀಗ ಎಲ್ಲಿಗೆ || ಘಮ ||



ಬಂತ್ಯಾಕ ನಿನಗ ಇಂದ ಮುನಿಸು ಬೀಳಲಿಲ್ಲ ನಂಗ ಇದರ ಕನಸು

ಪ್ರಾಯ ತಿಳಿಯಲಿಲ್ಲ ನಿನ್ನ ಮನಸು

ನೀ ಹೊರಟಿದ್ದೀಗ ಎಲ್ಲಿಗೆ || ಘಮ ||




Thursday, May 15, 2008

ಈ ಬಾನು ಈ ಚುಕ್ಕಿ



ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ

ತೇಲಿ ಸಾಗುವ ಮುಗಿಲು ಹರುಷ ಉಕ್ಕಿ

ಯಾರು ಇಟ್ಟರು ಇವನು ಹೀಗೆ ಇಲ್ಲಿ

ತುದಿಮೊದಲು ತಿಳಿಯದೀ ನೀಲಿಯಲಿ || ಈ ಬಾನು ||



ಒಂದೊಂದು ಹೂವಿಗೂ ಒಂದೊಂದು ಬಣ್ಣ

ಒಂದೊಂದು ಜೀವಕೂ ಒಂದೊಂದು ಕಣ್ಣ

ಯಾವುದೋ ಬಗೆಯಲ್ಲಿ ಎಲ್ಲರಿಗೂ ಅನ್ನ

ಕೊಟ್ಟ ಕರುಣೆಯ ಮೂಲ ಮರೆಸಿಹುದು ತನ್ನ || ಈ ಬಾನು ||



ನೂರಾರು ನದಿ ಕುಡಿದು ಮೀರದ ಕಡಲು

ಬೋರೆಂದು ಸುರಿ ಸುರಿದು ಆರದ ಮುಗಿಲು

ಸೇರಿಯೂ ಕೋಟಿ ತಾರೆ ತುಂಬದ ಬಯಲು

ಯಾರದೀ ಮಾಯೆ ಯಾವ ಬಿಂಬದ ನೆರಳು || ಈ ಬಾನು ||



ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ

ಹುಡುಕಿದರೆ ಕೀಲಿ ಕೈ ಸಿಗದೆ ಎದೆಯೊಳಗೆ

ತಿಳಿಯದಲೆದರಲ್ಲಿ ಕುಳಿತಿರುವೆ ನೀನೇ

ಎನ್ನುವರು ನನಗೀಗ ಸೋಜಿಗವು ನಾನೇ || ಈ ಬಾನು ||




ಒಂದು ಮುಂಜಾವಿನಲಿ


ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಸೋ ಎಂದು ಶೃತಿ ಹಿಡಿದು ಸುರಿಯುತ್ತಿತ್ತು

ಅದಕೆ ಹಿಮ್ಮೇಳವನೆ ಸೂಸಿ ಬಹ ಸುಳಿಗಾಳಿ

ತೆಂಗು ಗರಿಗಳ ನಡುವೆ ನುಸುಳುತ್ತಿತ್ತು || ಒಂದು ||



ಇಳೆ ವೆಣ್ನು ಮೈದೊಳೆದು ಮಕರಂದದರಿಷಿನದಿ

ಹೂ ಮುಡಿದು ಮಧುಮಗಳ ಹೋಲುತ್ತಿತ್ತು

ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ

ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು || ಒಂದು ||



ಹುಲ್ಲೆಸಳು ಹೂಕಪಳೆ ಮುತ್ತು ಹನಿಗಳ ಮಿಂಚು

ಸೊಡರಿನಲಿ ಆರತಿಯ ಬೆಳಗುತ್ತಿತ್ತು

ಕೊರಲುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ

ಶುಭಮಸ್ತು ಶುಭಮಸ್ತು ಎನ್ನುತ್ತಿತ್ತು || ಒಂದು ||



ತಳಿರ ತೋರಣದಲ್ಲಿ ಬಳ್ಳಿ ಬಾಣಗಳಲ್ಲಿ

ದುಂಬಿಗಳ ಓಂಕಾರ ಹೊಮ್ಮುತ್ತಿತ್ತು

ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ

ಚಿಟ್ಟೆ ರಿಂಗಣದುಣಿತ ಹಾಕುತ್ತಿತ್ತು || ಒಂದು ||



ಉಷೆಯ ನುಂಟದಪಿನಲಿ ಹರ್ಷ ಬಾಷ್ಪಗಳಂತೆ

ಮರದ ಹನಿ ತಟಪಟನೆ ಉದುರುತ್ತಿತ್ತು

ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದ ಮನ

ಮುಂಬಾಳ ಸವಿಗನಸ ನೆನೆಯುತ್ತಿತ್ತು || ಒಂದು ||

Friday, May 9, 2008

ಬಾರೋ ವಸಂತ ಬಾರೋ




ಬಾರೋ ವಸಂತ ಬಾರೋ ಬಾ... ಬಾರೋ

ಹೊಸ ಹೊಸ ಹರುಷದ ಹರಿಕಾರ

ಹೊಸ ಭಾವನೆಗಳ ಹೊಸ ಕಾಮನೆಗಳ

ಎದೆಯಲಿ ಬರೆಯುವ ನುಡಿಕಾರ || ಬಾರೋ ||




ಬಾರೋ ಸಂತನೆಗಳ ಕಳಚಿ

ಹೆಜ್ಜೆಗಳಿಗೆ ತಾಳವನುಣಿಸಿ

ದಣಿದ ಮೈಗೆ ತಂಗಾಳಿಯ

ಮನಸಿಗೆ ನಾಳೆಯ ಸುಖದೃಶ್ಯವ ಕಲಿಸಿ || ಬಾರೋ ||




ಮೊಗಚುತ ನೆನ್ನೆಯ ದು:ಖಗಳ

ತೆರೆಯುತ ಹೊಸ ಅಧ್ಯಾಯಗಳ

ಅರಸುತ ಎಲ್ಲರ ಮೇಲು ಕೀಳಿರದೆ

ಕಲಿಸುತ ಭವಿಷ್ಯದಾಸೆಗಳ || ಬಾರೋ ||




ಎಳೆ ಕಂದನ ದನಿ ಗೆಜ್ಜೆಯಲಿ

ಇನಿಯಳ ಮಲ್ಲಿಗೆ ಲಜ್ಜೆಯಲಿ

ಗೋಳು ಬಾಳಿನಲಿ ಹಸಿರ ಚಿಮ್ಮಿಸುವ

ಸೃಷ್ಟಿ ಶೀಲ ಹೊಸ ಹೆಜ್ಜೆಯಲಿ || ಬಾರೋ ||


COMMENTS