ಬಾರೋ ವಸಂತ ಬಾರೋ ಬಾ... ಬಾರೋ
ಹೊಸ ಹೊಸ ಹರುಷದ ಹರಿಕಾರ
ಹೊಸ ಭಾವನೆಗಳ ಹೊಸ ಕಾಮನೆಗಳ
ಎದೆಯಲಿ ಬರೆಯುವ ನುಡಿಕಾರ || ಬಾರೋ ||
ಬಾರೋ ಸಂತನೆಗಳ ಕಳಚಿ
ಹೆಜ್ಜೆಗಳಿಗೆ ತಾಳವನುಣಿಸಿ
ದಣಿದ ಮೈಗೆ ತಂಗಾಳಿಯ
ಮನಸಿಗೆ ನಾಳೆಯ ಸುಖದೃಶ್ಯವ ಕಲಿಸಿ || ಬಾರೋ ||
ಮೊಗಚುತ ನೆನ್ನೆಯ ದು:ಖಗಳ
ತೆರೆಯುತ ಹೊಸ ಅಧ್ಯಾಯಗಳ
ಅರಸುತ ಎಲ್ಲರ ಮೇಲು ಕೀಳಿರದೆ
ಕಲಿಸುತ ಭವಿಷ್ಯದಾಸೆಗಳ || ಬಾರೋ ||
ಎಳೆ ಕಂದನ ದನಿ ಗೆಜ್ಜೆಯಲಿ
ಇನಿಯಳ ಮಲ್ಲಿಗೆ ಲಜ್ಜೆಯಲಿ
ಗೋಳು ಬಾಳಿನಲಿ ಹಸಿರ ಚಿಮ್ಮಿಸುವ
ಸೃಷ್ಟಿ ಶೀಲ ಹೊಸ ಹೆಜ್ಜೆಯಲಿ || ಬಾರೋ ||
4 comments:
ನಮಸ್ತೆ,
ಬಹಳ ಉಪಯುಕ್ತವಾದ ಬ್ಲಾಗ್.
ಪ್ರಸಿದ್ಧ ಭಾವಗೀತೆಗಳ ಸಾಹಿತ್ಯ ಬೆರಳಂಚಿನಲ್ಲೇ ದೊರಕಿಸಿಕೊಡುತ್ತಿರುವುದಕ್ಕೆ ಧನ್ಯವಾದಗಳು. ಸಾಧ್ಯವಾದರೆ ದಯವಿಟ್ಟು ರಚನಾಕಾರರ ಹೆಸರನ್ನೂ ಹಾಕಿ ಎಂದು ಕೋರಿಕೆ.
-ವಿಕಾಸ್ ಹೆಗಡೆ
eradu vaaragalolage ella kavitegala rachanakaarara hesarugalannu haakalu prayatna maadutteve...nimma mechchugege dhanyavaadagalu... :)
Tumbu hrudhayad danyavaadagalu,tumba kushiyaaytu....innu bahalastu bhavageetegalu upload maadi....
Tumbu hrudhayad danyavaadagalu,tumba kushiyaaytu....innu bahalastu bhavageetegalu upload maadi....
Post a Comment