For proper results, open this webpage in Internet Explorer

Friday, July 11, 2008

ಆನಂದಮಯ ಈ ಜಗ ಹೃದಯ

ಕವಿ: ರಾಷ್ಟ್ರಕವಿ ಕುವೆಂಪು

ಕವಿಯ ಬಗ್ಗೆ:
ಪೂರ್ತಿ ಹೆಸರು: ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕಾಲ: ಡಿಸೆಂಬರ್ ೨೯, ೧೯೦೪ - ನವೆಂಬರ್ ೧೦, ೧೯೯೪
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀವು ಹಾಡನ್ನು ಈಗ ಕೇಳಲು ಇಲ್ಲಿ ಕ್ಲಿಕ್ ಮಾಡಿ - "ಹೊಸ ಅಂಶ"


ಆನಂದಮಯ ಜಗಹೃದಯ ಏತಕೆ ಭಯ ಮಾಣೋ

ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ

ಆನಂದಮಯ ಜಗಹೃದಯ



ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ

ಸೂರ್ಯನು ಬರಿ ರವಿಯಲ್ಲವೋ ಭ್ರಾಂತಿಯ ಮಾಣೋ

ಆನಂದಮಯ ಜಗಹೃದಯ.



ರವಿವದನವೇ ಶಿವಸದನವೊ ಬರಿ ಕಣ್ಣದು ಮಣ್ಣೋ

ಶಿವನಿಲ್ಲದೆ ಸೌಂದರ್ಯವೇ ಶವ ಮುಖದ ಕಣ್ಣೋ

ಆನಂದಮಯ ಜಗಹೃದಯ.



ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ

ಶಿವಕಾಣದೆ ಕವಿ ಕುರುಡನೋ ಶಿವ ಕಾವ್ಯದ ಕಣ್ಣೋ

ಆನಂದಮಯ ಜಗಹೃದಯ.

2 comments:

Abhirama Hegde said...

Sir i am searching for this song can you try to find it..?


ಒಮ್ಮೆ ಕದಡಿದ ಕೊಳವು ಮತ್ತೆ ತಿಳಿಯಾಗಿರಲು,
ತಳದಿ ಮಲಗಿಹ ಕಲ್ಲು ನಿನ್ನ ನೆನಪು ...
ಮುರಿದು ಬಿದ್ದ ಅರಮನೆಯ ಮೂಲೆ ಕಂಬದ ಮೇಲೆ,
ಬಾಡದಾ ಕುಸುರಿ ಹೂವು ನಿನ್ನ ನೆನಪು ...
ಮನಕೆ ಎಟುಕದೇ ಹೋದ ಕ್ಲಿಷ್ಟ ಕಾವ್ಯದ ನಡುವೆ,
ಇಳಿದು ಕಾಡುವ ಹಾಡು ನಿನ್ನ ನೆನಪು ...

Sudhindra Gargesa said...

ಕುವೆಂಪು ಅವರ ಈ ಒಂದು ಭಾವಗೀತೆಗಾಗಿ ಹುಡುಕುತ್ತಿದ್ದೇನೆ
ಕಡಲಿನಾಳವು ಹಿರಿದು
ಕಡಲಿನಾಳಕು ಮಿಗಿಲು ಮನಸಿನಾಳ

COMMENTS