For proper results, open this webpage in Internet Explorer

Sunday, April 20, 2008

ಅತ್ತಿತ್ತ ನೋಡದಿರು


ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು

ನಿದ್ದೆ ಬರುವಳು ಹೊದ್ದು ಮಲಗು ಮಗುವೇ

ಜೋ ಜೋಜೋಜೋ...

ಸುತ್ತಿ ಹೊರಳಾಡದಿರು ಮತ್ತೆ ಹಟ ಹೂಡದಿರು

ನಿದ್ದೆ ಬರುವಳು ಕದ್ದು ಮಲಗು ಮಗುವೇ

ಜೋ ಜೋಜೋಜೋ..



ಮಲಗು ಚೆಲ್ವಿನ ತೆರೆಯೆ ಮಲಗು ಒಲ್ಮೆಯ ಸಿರಿಯೆ

ಮಲಗು ತೊಟ್ಟಿಲ ಸಿರಿಯೆ ದೇವರಂತೆ

ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ

ಮಲಗು ಚಂದಿರನೂರ ಕೂಗುವೆಯಂತೆ || ಅತ್ತಿತ್ತ ||



ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ

ಚಂದಿರನ ತಂಗಿಯರು ನಿನ್ನ ಕರೆದು

ಹೂವ ಮುಡಿಸುವರಂತೆ ಹಾಲ ಕುಡಿಸುವರಂತೆ

ವೀಣೆ ನುಡಿಸುವರಂತೆ ಸುತ್ತ ನೆರೆದು || ಅತ್ತಿತ್ತ ||



ಬಣ್ಣ ಬಣ್ಣದ ಕನಸು ಕರಗುವುದು ಬಲು ಬೇಗ

ಹಗಲು ಬರುವನು ಬೆಳ್ಳಿ ಮುಗಿಲ ನಡುವೆ

ಚಿನ್ನದಂಬಾರಿಯಲಿ ನಿನ್ನ ಅಳುಕು ವರಾಮ

ಪಟ್ಟದಾನೆಯ ಮೇಲೆ ಪುಟ್ಟ ಮಗುವೆ || ಅತ್ತಿತ್ತ ||



5 comments:

ಅಂತರ್ವಾಣಿ said...

ತುಂಬಾ ಒಳ್ಳೆಯ ಬ್ಲಾಗಿದು.
ಧನ್ಯವಾದಗಳು

Sree said...

’ಮತ್ತೆ ಹಟ ಹೂಡದಿರು’, ’ಹೊಟ’ ಆಗ್ಬಿಟ್ಟಿದೆ!

Sathyanarayana.R.G said...

sree ಅವರೇ, ತಪ್ಪನ್ನು ಕಂಡು ಹಿಡಿದು ಹೇಳಿದ್ದಕ್ಕೆ ಧನ್ಯವಾದಗಳು. ನಾನು ಅದನ್ನು ಸರಿ ಪಡಿಸಿದ್ದೇನೆ.

Anonymous said...

"ಚಂದಿರನೂರ ಕೂಗುವೆಯಂತೆ" - ಅದು ಚಂದಿರನೋಡ ಹೋಗುವೆಯಂತೆ ಅಂತ ಇರ್ಬೇಕು.

ಬ್ಲಾಗ್ ಬಹಳ ಮೆಚ್ಚುಗೆಯಾಯ್ತು.

Anonymous said...

"ನಿನ್ನ ಕಳುಹುವರಾಗ" ಹೋಗಿ "ನಿನ್ನ ಕಳುಹು ವರಾಮ" ಆಗಿದೆ

COMMENTS