ಎಲ್ಲಾ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ
ನಿನ್ನ ಅಲ್ಲಗಳೆದ ನಮ್ಮ ಕರುಣೆಯಿಂದ ಕಾಯೆ || ಎಲ್ಲ ||
ಕಾರಿರುಳನು ಸೀಳಿ ಬರುವ ನಿಗಿ ನಿಗಿ ಉರಿ ಹರಳು
ನೀಲಿ ನಭದ ಹಾಸಿನಲ್ಲಿ ಮಣಿಗೇಯುವ ಇರುಳು
ಋತುವಿರದೆ ಮುಗಿಲ ಗಡಿಗೆ ಉರುಳಿ ಸುರಿವ ಜಲವು || ಎಲ್ಲ ||
ಸಿಂಗಾರದ ನಡಿಗೆಯಲ್ಲಿ ನದಿಯ ರೀತಿ ಹರಿವೆ
ಮಂಗಳಮಯ ಶಾಲಿವನದ ಸೆರಗ ಹೊದ್ದು ನಿಲುವೆ
ಬಂಗಾರದ ಸಂಜೆಯಲ್ಲಿ ಒಂದೇ ಕ್ಷಣ ಸಿಳುವೆ || ಎಲ್ಲ ||

2 comments:
Beautiful song. Thanks for typing this Sathyanarayana. - Your friend
ಧನ್ಯವಾದಗಳು ಸರ್ ಲಿರಿಕ್ಸ್ ನ್ನು ಅವಶ್ಯವಿದ್ದವರಿಗೆ ಒದಗಿಸುರುವುದಕ್ಕೆ
Post a Comment