For proper results, open this webpage in Internet Explorer

Friday, July 11, 2008

ಅಮ್ಮ ನಿನ್ನ ಎದೆಯಾಳದಲ್ಲಿ

ಕವಿ: ಬಿ ಆರ್ ಲಕ್ಷ್ಮಣ್ ರಾವ್

ನೀವು ಹಾಡನ್ನು ಈಗ ಕೇಳಲು ಇಲ್ಲಿ ಕ್ಲಿಕ್ ಮಾಡಿ - "ಹೊಸ ಅಂಶ"

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು

ಕಡಿಯಾಲೊಲ್ಲೇ ಕರುಳ ಬಳ್ಳಿ

ಒಲವೂಡುತಿರುವ ತಾಯೆ ಬಿಡದ ಭುವಿಯ ಮಾಯೆ.




ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ ದೂಡು ಹೊರಗೆ ನನ್ನ

ಓಟ ಕಲಿವೆ ಒಳನಾಟ ಕಲಿವೆ

ನಾ ಕಲಿವೆ ಊರ್ಧ್ವಗಮನ

ಅಗಾಧ ಗಗನ || ಅಮ್ಮ ನಿನ್ನ ||




ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭರ ಸ್ಥಿತಿಗೆ ತಲುಪಿ ಬ್ರಹ್ಮಾಂಡವನ್ನೇ ಬೆದಕಿ

ಇಂಧನ ತೀದಲು ಬಂದೆ ಬರುವೆನು

ಮತ್ತೆ ನಿನ್ನ ತೊಡೆಗೆ

ಮೂರ್ತ ಪ್ರೇಮದೆಡೆಗೆ || ಅಮ್ಮ ನಿನ್ನ ||

ಆನಂದಮಯ ಈ ಜಗ ಹೃದಯ

ಕವಿ: ರಾಷ್ಟ್ರಕವಿ ಕುವೆಂಪು

ಕವಿಯ ಬಗ್ಗೆ:
ಪೂರ್ತಿ ಹೆಸರು: ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕಾಲ: ಡಿಸೆಂಬರ್ ೨೯, ೧೯೦೪ - ನವೆಂಬರ್ ೧೦, ೧೯೯೪
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀವು ಹಾಡನ್ನು ಈಗ ಕೇಳಲು ಇಲ್ಲಿ ಕ್ಲಿಕ್ ಮಾಡಿ - "ಹೊಸ ಅಂಶ"


ಆನಂದಮಯ ಜಗಹೃದಯ ಏತಕೆ ಭಯ ಮಾಣೋ

ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ

ಆನಂದಮಯ ಜಗಹೃದಯ



ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ

ಸೂರ್ಯನು ಬರಿ ರವಿಯಲ್ಲವೋ ಭ್ರಾಂತಿಯ ಮಾಣೋ

ಆನಂದಮಯ ಜಗಹೃದಯ.



ರವಿವದನವೇ ಶಿವಸದನವೊ ಬರಿ ಕಣ್ಣದು ಮಣ್ಣೋ

ಶಿವನಿಲ್ಲದೆ ಸೌಂದರ್ಯವೇ ಶವ ಮುಖದ ಕಣ್ಣೋ

ಆನಂದಮಯ ಜಗಹೃದಯ.



ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ

ಶಿವಕಾಣದೆ ಕವಿ ಕುರುಡನೋ ಶಿವ ಕಾವ್ಯದ ಕಣ್ಣೋ

ಆನಂದಮಯ ಜಗಹೃದಯ.

COMMENTS